ಅರಫಾ: ಹಜ್ ಯಾತ್ರಿಕರ ಸೇವೆಯಲ್ಲಿ ಐಎಫ್ಎಫ್

Update: 2018-08-21 03:55 GMT

ಮಕ್ಕಾ, ಆ. 21: ಹಜ್ ಯಾತ್ರೆಯ ಭಾಗವಾಗಿ ಅರಫಾ ಮೈದಾನದಲ್ಲಿ ಸೇರಿದ ಹಜ್ಜಾಜ್ ಗಳ ಸೇವೆಗಾಗಿ ಇಂಡಿಯಾ  ಫ್ರೆಟರ್ನಿಟಿ ಫಾರಂ ಸುಮಾರು 250 ಸದಸ್ಯರಿರುವ ಸ್ವಯಂ ಸೇವಕರ ತಂಡವನ್ನು ನಿಯೋಜಿಸಿತ್ತು.

ಹನ್ನೊಂದು ಮಂದಿ ನಾಯಕರ ವಿವಿಧ ತಂಡ ಗಳಾಗಿ ಸೇವೆ ಯಲ್ಲಿ ತೊಡಗಿದ ಐಎಫ್ಎಫ್ ಸದಸ್ಯರು, ಅರಫಾದ ತೀವ್ರ ಬಿಸಿಲ ಧಗೆಗೆ ಅಸ್ವಸ್ಥರಾದ ಹಾಜಿಗ ಳ ಆರೈಕೆಯಲ್ಲಿ ತೊಡಗಿದರು.

ಸ್ವಯಂ ಸೇವಕರು ಅಸ್ವಸ್ಥ ಹಾಜಿಗಳಿಗೆ ವೀಲ್ ಚಯಾರ್ ಗಳನ್ನೂ ಒದಗಿಸಿದರು ಮತ್ತು ಅಗತ್ಯವಿದ್ದವರಿಗೆ ವೈದ್ಯಕೀಯ ನೆರವು ಒದಗಿಸಿದರು. ಅರಫಾ ಕರ್ಮವು ಮುಗಿದ ಬಳಿಕ ಹಜ್ಜಾಜ್ ಗಳಿಗೆ ತಮ್ಮ ವಸತಿಗೆ ಮರಳಲು ಸ್ವಯಂ ಸೇವಕರು ನೆರವಾದರು. ಅರಫಾ ಕರ್ಮ ಮುಗಿಸಿದ ಯಾತ್ರಿಕರೆಲ್ಲರೂ ಮೈದಾನವನ್ನು ತೊರೆಯುವ ತನಕ ಸ್ವಯಂ ಸೇವಕರು ಮೈದಾನದಲ್ಲಿ ಹಾಜರಿದ್ದರು.

ಈ ಬಾರಿ ಹಜ್ ಯಾತ್ರಿಕರ ಸೇವೆಗಾಗಿ ಇಂಡಿಯಾ ಫ್ರೆಟರ್ನಿಟಿ ಫಾರಂ ಒಟ್ಟು 1500 ಸದಸ್ಯರನ್ನು ಮಕ್ಕಾದ ವಿವಿಧ ಭಾಗಗಳಲ್ಲಿ ನಿಯೋಜಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News