×
Ad

ಪ್ರಕೃತಿ ವಿಕೋಪ ಸಂತ್ರಸ್ತರಿಗೆ ನೆರವಾಗಲು 25 ಕೋಟಿ ರೂ. ಮಂಜೂರು: ಸಚಿವ ಪ್ರಿಯಾಂಕ್ ಖರ್ಗೆ

Update: 2018-08-22 20:34 IST

ಬೆಂಗಳೂರು, ಆ. 22: ಭಾರಿ ಮಳೆಯಿಂದ ಕೊಡಗು ಜಿಲ್ಲೆಯಲ್ಲಿ ಉಂಟಾಗಿರುವ ಪ್ರವಾಹ ಹಾಗೂ ಭೂಕುಸಿತಗಳಿಂದ ಜೀವ ಮತ್ತು ಆಸ್ತಿ ಹಾನಿಯಿಂದ ಸಂತ್ರಸ್ತರಾಗಿರುವವರ ರಕ್ಷಣೆಗೆ ರಾಜ್ಯ ಸರ್ಕಾರ ಧಾವಿಸಿದ್ದು, ಅಗತ್ಯವಿರುವವರಿಗೆ ಆಹಾರ, ಪುನರ್ವಸತಿ ಕಲ್ಪಿಸಲು ಎಲ್ಲ ವಿಧವಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಸರ್ಕಾರದ ಈ ಅವಿರತ ಶ್ರಮಕ್ಕೆ ಪೂರಕವಾಗುವಂತೆ ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ತೊಂದರೆಗೊಳಗಾಗಿರುವ ಅತ್ಯಂತ ದುರ್ಬಲ  ಸ್ಥಿತಿಯಲ್ಲಿರುವ ಸಂತ್ರಸ್ತರ ನೆರವಿಗಾಗಿ ಸಮಾಜ ಕಲ್ಯಾಣ ಇಲಾಖೆಯಿಂದ 25 ಕೋಟಿ ರೂ. ಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ. ತಮ್ಮ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಕೊಡಗು ಜಿಲ್ಲಾ ಪ್ರವಾಸಕ್ಕೆ ತೆರಳುವಂತೆ ಸಚಿವರು ಸೂಚಿಸಿದ್ದು, ಅಧಿಕಾರಿಗಳು ಹಾನಿಯನ್ನು ಅಂದಾಜು ಮಾಡಲಿದ್ದಾರೆ ಎಂದು ಹೇಳಿದ್ದಾರೆ.

“ಇಂತಹ ನೈಸರ್ಗಿಕ ವಿಕೋಪಗಳು ಸಮಾಜದ ಅತ್ಯಂತ ದುರ್ಬಲ ಜನರ ಮೇಲೆ ಹೆಚ್ಚು ಹಾನಿಯನ್ನುಂಟು ಮಾಡುತ್ತದೆ ಎಂಬುದನ್ನು ನಾವು ಈ ಹಿಂದೆ ಬಹಳ ಬಾರಿ ನೋಡಿದ್ದೇವೆ, ಹಾನಿಯನ್ನು ತಕ್ಷಣ ಮೌಲ್ಯಮಾಪನ ಮಾಡಲು ಸುರಿಯುತ್ತಿರುವ ಮಳೆ ಅಡ್ಡಿಯಾಗಿದೆ, ಮಳೆ ಇಳಿದ ಕೂಡಲೆ ಇಲಾಖೆ ಸಮೀಕ್ಷೆ ನಡೆಸಲಿದ್ದು, ತಕ್ಷಣದ ಕ್ರಮ ಕೈಗೊಳ್ಳಲಿದೆ” ಎಂದು ಖರ್ಗೆ ತಿಳಿಸಿದ್ದಾರೆ.

ಸಮಾಜ ಕಲ್ಯಾಣ ಇಲಾಖೆ ಹಾಗೂ ಅದರ ಅಡಿ ಬರುವ ನಿಗಮ, ಮಂಡಳಿಗಳ ಅಧಿಕಾರಿಗಳು ಹಾಗೂ ನೌಕರರು ತೊದರೆಗೊಳಗಾದವರಿಗೆ ನೆರವಾಗುವಂತೆ ಸಚಿವ  ಖರ್ಗೆ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News