×
Ad

ಕೆ ಎಸ್ ಆರ್ ಟಿ ಸಿ ಮೇಲ್ವಿಚಾರಕೇತರ, ತಾಂತ್ರಿಕ ಸಿಬ್ಬಂದಿ ನೇಮಕಾತಿ ಪರೀಕ್ಷೆ ಮುಂದೂಡಿಕೆ

Update: 2018-08-22 23:16 IST

ಬೆಂಗಳೂರು, ಆ. 22: ಭಾರಿ ಮಳೆ ಮತ್ತು ಭೂಕುಸಿತದಿಂದಾಗಿ ಕರಾವಳಿ ಭಾಗ ಮತ್ತು ಕೊಡಗು ಜಿಲ್ಲೆ ಪ್ರಕೃತಿ ವಿಕೋಪಕ್ಕೆ ತುತ್ತಾಗಿದ್ದು, ಆ.25 ಮತ್ತು 26 ರಂದು ನಡೆಸಲು ಉದ್ದೇಶಿಸಿದ್ದ ಕೆ ಎಸ್ ಆರ್ ಟಿ ಸಿ ಮೇಲ್ವಿಚಾರಕೇತರ ಹಾಗೂ ತಾಂತ್ರಿಕ ಸಿಬ್ಬಂದಿ ನೇಮಕಾತಿ ಪರೀಕ್ಷೆಯನ್ನು ಮುಂದೂಡಲಾಗಿದೆ.

ಈ ಹಿನ್ನಲೆಯಲ್ಲಿ, ಸ್ಥಳೀಯ ಜನಪ್ರತಿನಿಧಿಗಳು ಹಾಗೂ  ಪರೀಕ್ಷಾ ಅಭ್ಯರ್ಥಿಗಳು, ಕೆಎಸ್ಆರ್ ಟಿ ಸಿ ದಿನಾಂಕ 25 ಮತ್ತು 26 ರಂದು ನಡೆಸಲು ಉದ್ದೇಶಿಸಿದ್ದ ಮೇಲ್ವಿಚಾರಕೇತರ ಹಾಗೂ ತಾಂತ್ರಿಕ ಸಿಬ್ಬಂದಿಗಳ ನೇಮಕಾತಿಯ ಲಿಖಿತ ಪರೀಕ್ಷೆಯನ್ನು ಮುಂದೂಡುವಂತೆ ಮನವಿ ಸಲ್ಲಿಸಿರುತ್ತಾರೆ. 

ಸದರಿ ಮನವಿಯನ್ನು ಪರಿಗಣಿಸಿ, ಪರಿಸ್ಥಿತಿಯನ್ನು ಅವಲೋಕಿಸಿ ಮಾನ್ಯ ಸಾರಿಗೆ ಸಚಿವರು ಉದ್ದೇಶಿತ ಲಿಖಿತ ಪರೀಕ್ಷಾ ದಿನಾಂಕವನ್ನು‌ ಮುಂದೂಡಲು ಸೂಚಿಸಿರುತ್ತಾರೆ. ಮುಂದಿನ ಪರೀಕ್ಷಾ ದಿನಾಂಕವನ್ನು ಕೆಎಸ್ ಆರ್ ಟಿ ಸಿ ವೆಬ್ ಸೈಟ್ www.ksrtcjobs.com ಮತ್ತು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News