ಆ.23ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅಜ್ಮೇರ್ ಗೆ ಭೇಟಿ
Update: 2018-08-22 23:19 IST
ಬೆಂಗಳೂರು, ಆ. 22: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಆ.23 ರಂದು ಬೆಳಗ್ಗೆ 5 ಗಂಟೆಗೆ ಅಜ್ಮೇರ್ ಗೆ ತೆರಳಲಿದ್ದಾರೆ.
ಅಲ್ಲಿ ಅವರು ಪುಷ್ಕರ್ ನ ಬ್ರಹ್ಮ ದೇವಾಲಯ ಹಾಗೂ ಅಜ್ಮೇರ್ ನ ಗರೀಬ್ ನವಾಝ್ ದರ್ಗಾಕ್ಕೆ ಭೇಟಿ ನೀಡಿ, ಸಂಜೆ 4 ಗಂಟೆಗೆ ಬೆಂಗಳೂರಿಗೆ ಹಿಂತಿರುಗುವರು.