ಉದ್ಯೋಗಿಗಳ ಧರ್ಮ, ಜಾತಿಯ ವೈಯಕ್ತಿಕ ವಿವರ ಕೇಳುತ್ತಿರುವ ಸರಕಾರ: ತೈಲ ವಿತರಕ ಸಂಸ್ಥೆಗಳ ಆಕ್ಷೇಪ

Update: 2018-08-23 06:39 GMT

ಬೆಂಗಳೂರು, ಆ.23: ಪೆಟ್ರೋಲ್ ಬಂಕುಗಳಲ್ಲಿ ಸೇವೆ ಸಲ್ಲಿಸುತ್ತಿರುವ 10 ಲಕ್ಷಕ್ಕೂ ಅಧಿಕ ಉದ್ಯೋಗಿಗಳ ಸೂಕ್ಷ್ಮ ವೈಯಕ್ತಿಕ  ಮಾಹಿತಿಗಳಾದ ಜಾತಿ, ಧರ್ಮ ಮತ್ತು ಕ್ಷೇತ್ರಗಳ ಬಗ್ಗೆ ವಿವರಗಳನ್ನು ಸರಕಾರ ಮತ್ತು ಪ್ರಮುಖ ತೈಲ ಕಂಪೆನಿಗಳು ಕೇಳುತ್ತಿರುವ ಬಗ್ಗೆ ಪೆಟ್ರೋಲ್ ವಿತರಕರು ಆಕ್ಷೇಪ ಸೂಚಿಸಿದ್ದಾರೆ.

“ಸರಕಾರ ಈ ರೀತಿಯಾಗಿ ಮಾಹಿತಿಯನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿರುವುದು ಅಸಂವಿಧಾನಿಕ ಹಾಗೂ ಖಾಸಗಿತನದ ಉಲ್ಲಂಘನೆಯಾಗಿದೆ'' ಎಂದು ಪೆಟ್ರೋಲ್ ವಿತರಕರ ಸಂಘಟನೆಗಳು ಹೇಳಿವೆ.

ಕನ್ಸಾರ್ಟಿಯಂ ಆಫ್ ಇಂಡಿಯನ್ ಪೆಟ್ರೋಲಿಯಂ ಡೀಲರ್ಸ್ (ಸಿಐಪಿಡಿ), ಪಂಜಾಬ್ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಶನ್ ಮತ್ತಿತರ ವಿತರಕ ಸಂಸ್ಥೆಗಳು ತಮಗೆ ಜೂನ್ 5 ಮತ್ತು 6ರಂದು ಹಿಂದುಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್, ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ ಹಾಗೂ ಭಾರತ್ ಪೆಟ್ರೋಲಿಯಂ  ಕಾರ್ಪೊರೇಶನ್ ಲಿಮಿಟೆಡ್ ಇವುಗಳಿಂದ ಬಂದಿರುವ ಸೂಚನೆಗಳನ್ನು ವಿರೋಧಿಸುತ್ತಿವೆ.

ಜೂನ್ 11ರಂದು ಮೂರೂ ಪೆಟ್ರೋಲಿಯಂ ಕಂಪೆನಿಗಳಿಗೆ ಪತ್ರ ಬರೆದ ಸಿಐಪಿಡಿ,  ತಮಗೆ ನಿಡಲಾದ ಸೂಚನೆಗಳು ಮೂಲಭೂತ  ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಹೇಳಿದೆ. ಕೇಳಲಾದ ಮಾಹಿತಿಯನ್ನು ನೀಡುವುದಿಲ್ಲ ಇದು ಖಾಸಗಿತನದ ಉಲ್ಲಂಘನೆಯಾಗಿದೆ ಎಂದು ಅದು ಹೇಳಿದೆ.

ಕೇಳಲಾದ ಮಾಹಿತಿಗಳನ್ನು ನೀಡದ ಹರ್ಯಾಣದ ಕೆಲ ವಿತರಕರಿಗೆ ತೈಲ ಪೂರೈಕೆಯನ್ನು ಭಾರತ್ ಪೆಟ್ರೋಲಿಯಂ  ಈ ತಿಂಗಳು  ನಿಲ್ಲಿಸಿದಾಗ ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ಹೋಗಿದೆ.

 ಸಾರ್ವಜನಿಕ ಕ್ಷೇತ್ರದ ಮೂರೂ ತೈಲ ಕಂಪೆನಿಗಳು 24 ವಿವರಗಳನ್ನು ಕೇಳಿದ್ದು  ಸರಕಾರಕ್ಕೆ ಪ್ರಧಾನ ಮಂತ್ರಿಗಳ ಕೌಶಲ್ಯಾಭಿವೃದ್ಧಿ ಯೋಜನೆಯ ಅಂಗವಾಗಿ ರೆಕಗ್ನಿಷನ್ ಆಫ್ ಪ್ರಯರ್ ಲರ್ನಿಂಗ್ ಸ್ಕೀಂಗಾಗಿ ಈ ಮಾಹಿತಿಯ ಅಗತ್ಯವಿದೆ ಎಂದು  ಸಂಸ್ಥೆಗಳು ಹೇಳುತ್ತಿದ್ದರೂ ಇದನ್ನು ತೈಲ ವಿತರಕರು ಒಪ್ಪಲು ಸಿದ್ಧರಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News