×
Ad

ವರಲಕ್ಷ್ಮಿ ಹಬ್ಬ: ದೇವರಿಗೆ ಅಲಂಕರಿಸುವ ಆಭರಣಗಳ ಬಗ್ಗೆ ಎಚ್ಚರ ವಹಿಸಲು ಸೂಚನೆ

Update: 2018-08-23 21:35 IST

ಬೆಂಗಳೂರು, ಆ.23: ವರಲಕ್ಷ್ಮಿ ಹಬ್ಬದ ಪ್ರಯುಕ್ತ ಪೂಜೆಗೆ ಅಲಂಕರಿಸುವ ಆಭರಣಗಳ ಕುರಿತು ಎಚ್ಚರಿಕೆ ವಹಿಸಬೇಕೆಂದು ಸಾರ್ವಜನಿಕರಿಗೆ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.

ಮನೆಗಳಲ್ಲಿ ಲಕ್ಷ್ಮಿ ದೇವರಿಗೆ ಆಭರಣಗಳಿಂದ ಅಲಂಕರಿಸಿದ ನಂತರ ಸ್ಥಳದಲ್ಲಿ ಯಾರಾದರು ಕಾವಲಿರಬೇಕು. ರಾತ್ರಿ ಮಲಗಿದ ನಂತರ ಕಿಟಕಿ, ಬಾಗಿಲುಗಳನ್ನು ಭದ್ರ ಪಡಿಸಿಕೊಳ್ಳಬೇಕು. ಕಿಟಕಿಯ ಸಮೀಪ ದೇವರನ್ನು ಅಲಂಕರಿಸಬಾರದು. ಮಹಿಳೆಯರು ಆಭರಣಗಳನ್ನು ಧರಿಸಿ ಓಡಾಡುವಾಗ ಅನಗತ್ಯವಾಗಿ ತಮ್ಮ ಆಭರಣಗಳನ್ನು ಪ್ರದರ್ಶಿಸಬಾರದು. ಯಾರಾದರು ದ್ವಿಚಕ್ರದಲ್ಲಿ ತಮ್ಮನ್ನು ಹಿಂಬಾಲಿಸುತ್ತಿರುವುದು ಕಂಡು ಬಂದಲ್ಲಿ ಕೂಡಲೆ ಅಕ್ಕಪಕ್ಕದವರನ್ನು ಕೂಗಿ ಕರೆಯಬೇಕು ಹಾಗೂ ಹತ್ತಿರದ ಪೊಲೀಸ್ ಠಾಣೆಗೆ ದೂರು ಸಲ್ಲಿಸಬೇಕು ಎಂದು ರಾಜ್ಯ ಪೊಲೀಸ್ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News