×
Ad

ನಗರದ ಸಮಸ್ಯೆಗಳ ಪರಿಶೀಲನೆಗೆ ಉಸ್ತುವಾರಿ ಅಧಿಕಾರಿಗಳ ನೇಮಕ

Update: 2018-08-23 21:35 IST

ಬೆಂಗಳೂರು, ಆ. 23: ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ(ಬಿಬಿಎಂಪಿ) ವ್ಯಾಪ್ತಿಯಲ್ಲಿನ ಎಂಟು ವಲಯಗಳಲ್ಲಿನ ಸಮಸ್ಯೆಗಳ ಪರಿಶೀಲನೆ ಹಾಗೂ ಅಗತ್ಯ ಪರಿಹಾರ ಕಲ್ಪಿಸುವ ದೃಷ್ಟಿಯಿಂದ ಬೆಂಗಳೂರು ವಲಯ ಉಸ್ತುವಾರಿ ಅಧಿಕಾರಿಗಳನ್ನು ನೇಮಿಸಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಆದೇಶ ಹೊರಡಿಸಿದ್ದಾರೆ.

ಕನಿಷ್ಠ ತಿಂಗಳಿಗೊಮ್ಮೆ ವಲಯಗಳಿಗೆ ಖುದ್ದು ಭೇಟಿ, ಕ್ಷೇತ್ರ ಸಂದರ್ಶನ, ಸಮಸ್ಯೆಗಳ ಅವಲೋಕಿಸಿ ಅವುಗಳ ಪರಿಹಾರಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುವುದು, ವಲಯ ಮಟ್ಟದಲ್ಲಿ ಬಿಬಿಎಂಪಿ, ಬಿಡಿಎ, ಬೆಸ್ಕಾಂ, ಪಿಡಬ್ಲೂಡಿ, ಸಂಚಾರ ಸೇರಿ ವಲಯ ಮಟ್ಟದ ಅಧಿಕಾರಿಗಳ ಮಧ್ಯೆ ಸಮನ್ವಯತೆ ಮೂಡಿಸಬೇಕು. ಕೈಗೊಂಡ ಕ್ರಮಗಳ ವರದಿಯನ್ನು ಸಿಎಸ್‌ಗೆ ನೀಡಬೇಕೆಂದು ನಿರ್ದೇಶಿಸಲಾಗಿದೆ.

ಪಶ್ಚಿಮ ವಲಯ-ವಿ.ಶಂಕರ್, ಬೊಮ್ಮನಹಳ್ಳಿ-ವಿ.ಯಶವಂತ, ಮಹದೇವಪುರ- ಡಾ.ರೇಜು ಎಂ.ಟಿ., ಪೂರ್ವ ವಲಯ-ಎನ್.ಮಂಜುಳಾ, ಬ್ಯಾಟರಾಯನಪುರ- ಎನ್.ಎಸ್.ಪ್ರಸನ್ನಕುಮಾರ್, ದಕ್ಷಿಣ ವಲಯ-ಡಾ.ಅಜಯ್ ನಾಗಭೂಷಣ, ದಾಸರಹಳ್ಳಿ-ಡಾ.ಎನ್.ವಿ.ಪ್ರಸಾದ್ ಹಾಗೂ ರಾಜರಾಜೇಶ್ವರಿ ನಗರ-ಡಾ. ತ್ರಿಲೋಕ ಚಂದ್ರ ಅವರನ್ನು ನೇಮಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News