ಯುವಕ ಕಾಣೆ: ಪತ್ತೆಗೆ ಮನವಿ

Update: 2018-08-23 17:36 GMT

ಬೆಂಗಳೂರು, ಆ.23: ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಂಗಸ್ವಾಮಿ (20) ಕಾಣೆಯಾಗಿದ್ದು, ಪತ್ತೆಯಾದಲ್ಲಿ ಇಲ್ಲಿನ ಪೊಲೀಸ್ ಠಾಣೆಗೆ ತಿಳಿಸುವಂತೆ ಮನವಿ ಮಾಡಲಾಗಿದೆ.

ಕಾಣೆಯಾದ ವ್ಯಕ್ತಿಯ ಚಹರೆ: ರಂಗಸ್ವಾಮಿ 20 ವರ್ಷ, ತೆಳ್ಳನೆಯ ಮೈಕಟ್ಟು, ಕಪ್ಪು ಮೈಬಣ್ಣ, ಗುಂಡು ಮುಖ, 5 ಅಡಿ ಎತ್ತರ, ಬಲತೋಳಿನಲ್ಲಿ ಹಚ್ಚೆ ಗುರುತು ಇರುತ್ತದೆ. ಕತ್ತಿನಲ್ಲಿ ತಾಯತ ಕಟ್ಟಿರುತ್ತಾರೆ. ಹಳದಿ ಬಣ್ಣದ ಶರ್ಟ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ಕಪ್ಪು ಬಣ್ಣದ ಪುಲ್ ಓವರ್ ಧರಿಸಿರುತ್ತಾರೆ ಎಂದು ಪೊಲೀಸ್ ಸನ್‌ಇನ್‌ಸ್ಪೆಕ್ಟರ್, ತಲಘಟ್ಟಪುರ ಪೊಲೀಸ್ ಠಾಣೆ ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News