ಎರಡು ರಾಷ್ಟ್ರೀಯ ದಾಖಲೆ ನಿರ್ಮಿಸಿದ ನಟರಾಜ್‌ಗೆ 6ನೇ ಸ್ಥಾನ

Update: 2018-08-23 18:37 GMT

ಜಕಾರ್ತ, ಆ.23: ಏಶ್ಯನ್ ಗೇಮ್ಸ್‌ನಲ್ಲಿ 200 ಮೀ.ಬ್ಯಾಕ್‌ಸ್ಟ್ರೋಕ್ ಸ್ಪರ್ಧೆಯಲ್ಲಿ ಭಾರತದ ಸ್ವಿಮ್ಮರ್ ಶ್ರೀಹರಿ ನಟರಾಜ್ ಎರಡು ಬಾರಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರೂ ಫೈನಲ್‌ನಲ್ಲಿ 2:02.83 ಸೆಕೆಂಡ್‌ನಲ್ಲಿ ಗುರಿ ತಲುಪಿ ಆರನೇ ಸ್ಥಾನ ಪಡೆಯಲಷ್ಟೇ ಶಕ್ತರಾದರು. ಇನ್ನೋರ್ವ ಸ್ವಿಮ್ಮರ್ ವೀರ್ ಧವಳ್ ಖಾಡೆ 50 ಮೀ. ಬಟ್ಲರ್ ಫ್ಲೈ ಸ್ಪರ್ಧೆಯಲ್ಲಿ ಕೊನೆಯ ಎಂಟನೇ ಸ್ಥಾನ ಪಡೆದರು. ಖಾಡೆ ಫೈನಲ್‌ನಲ್ಲಿ 24.48 ಸೆಕೆಂಡ್‌ನಲ್ಲಿ ಗುರಿ ತಲುಪಿದರು.

50 ಮೀ. ಬಟ್ಲರ್ ಫ್ಲೈ ವಿಭಾಗದ ಹೀಟ್-2ರಲ್ಲಿ 24.09 ಸೆಕೆಂಡ್‌ನಲ್ಲಿ ಗುರಿ ತಲುಪಿದ್ದ ಖಾಡೆ 5ನೇ ಸ್ಥಾನ ಪಡೆದರು. ಈ ಮೂಲಕ 2009ರಲ್ಲಿ ಚೀನಾದಲ್ಲಿ ನಡೆದ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿನ ತನ್ನ ರಾಷ್ಟ್ರೀಯ ದಾಖಲೆ (24.14)ಸಮಯವನ್ನು ಉತ್ತಮಪಡಿಸಿಕೊಂಡರು.

ಸೆಕೆಂಡ್‌ನಲ್ಲಿ ಗುರಿ ತಲುಪಿ ತನ್ನ ಹಿಂದಿನ ದಾಖಲೆಯನ್ನು (2:03.17)ಉತ್ತಮಪಡಿಸಿಕೊಂಡು ಫೈನಲ್‌ಗೆ ತಲುಪಿದರು. 2018ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 2:04.75 ಸೆಕೆಂಡ್‌ನಲ್ಲಿ ಗುರಿ ತಲುಪಿದ್ದ 12ನೇ ತರಗತಿಯ ವಿದ್ಯಾರ್ಥಿ ನಟರಾಜ್ ಗೇಮ್ಸ್‌ನಲ್ಲಿ ಮೂರು ರಾಷ್ಟ್ರೀಯ ದಾಖಲೆಯೊಂದಿಗೆ ತವರಿಗೆ ವಾಪಸಾಗಲಿದ್ದಾರೆ. ನಟರಾಜ್ 50 ಮೀ. ಬ್ಯಾಕ್‌ಸ್ಟ್ರೋಕ್(26.19)ಹಾಗೂ 100 ಮೀ.ಬ್ಯಾಕ್‌ಸ್ಟ್ರೋಕ್ (55.86)ನಲ್ಲೂ ನ್ಯಾಶನಲ್ ರೆಕಾರ್ಡ್ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News