ಕೆಸಿಎಫ್‌‌: ಸೌದಿ ಆರೋಗ್ಯ ಇಲಾಖೆಯಿಂದ ಪ್ರಶಂಸಾ ಪತ್ರ

Update: 2018-08-24 06:17 GMT

ರಿಯಾದ್, ಆ. 24: ಕೆಸಿಎಫ್ ಕಾರ್ಯಕರ್ತರ ಪ್ರಾಮಾಣಿಕ ಸೇವೆಯನ್ನು ಮನಗಂಡ ಸೌದಿ ಆರೋಗ್ಯ ಇಲಾಖೆಯ ಅಧೀನದಲ್ಲಿರುವ "ನ್ಯೂ ಮಿನಾ ಆಸ್ಪತ್ರೆ" ಕಳೆದ ನಾಲ್ಕು ವರ್ಷಗಳಿಂದ ಪ್ರಶಂಸಾ ಪತ್ರ ನೀಡಿ ಗೌರವಿಸುತ್ತಿದೆ. ಅದರಂತೆ ಗುರುವಾರ ಮಿನಾ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ವರ್ಗ ಕೆಸಿಎಫ್ ಕಾರ್ಯಕರ್ತರ ಸೇವೆಯನ್ನು ಶ್ಲಾಘಿಸಿ ಪ್ರಶಂಸಾ ಪತ್ರ ನೀಡಿ, ಗೌರವಿಸಿದರು.

ಯಾತ್ರಾರ್ಥಿಗಳ (ಹಾಜಿಗಳ) ಸೇವೆಗಾಗಿ ಕಳೆದ ನಾಲ್ಕು ವರ್ಷಗಳಿಂದ ಸೌದಿ ಅರೇಬಿಯಾದಾದ್ಯಂತ ನೆಲೆಸಿರುವ ಅನಿವಾಸಿ ಕನ್ನಡಿಗರ  ಸಂಘಟನೆ ಕೆಸಿಎಫ್‌ನ ಕಾರ್ಯಕರ್ತರು ಹಾಜಿಗಳ ಸೇವೆಗಾಗಿ "ಎಚ್.ವಿ.ಸಿ" ಎಂಬ ತಂಡವನ್ನು ರಚಿಸಿ ಮಕ್ಕಾದ ಮಿನಾ, ಮುಝ್ದಲಿಫ ತಲುಪಿದ ಯಾತ್ರಾರ್ಥಿಗಳ ಸೇವೆಗಾಗಿ ಮೂರು ದಿನಗಳ ಕಾಲ ದಿನದ 24 ಘಂಟೆಯೂ ಸ್ವಯಂ ಸೇವೆಯಲ್ಲಿ ನಿರತರಾಗುತ್ತಾರೆ.

ಸೌದಿ ಅರೇಬಿಯಾದಲ್ಲಿ ನಡೆಯುವ ಪವಿತ್ರ ಹಜ್ ಮಹಾ ಸಂಗಮಕ್ಕೆ ದೇಶ ವಿದೇಶಗಳಿಂದ ಪ್ರತಿ ವರ್ಷವೂ ಲಕ್ಷಾಂತರ ಯಾತ್ರಾರ್ಥಿಗಳು ಆಗಮಿಸುತ್ತಾರೆ. ಮಕ್ಕಾ,ಮದೀನಾದಲ್ಲಿ ನೆಲೆಸಿರುವ ಕೆಸಿಎಫ್ ಕಾರ್ಯಕರ್ತರು ಕಳೆದ ಒಂದು ತಿಂಗಳಿನಿಂದ ಸ್ವಯಂ ಸೇವೆಯಲ್ಲಿ ತೊಡಗಿಕೊಂಡಿರುತ್ತಾರೆ.

ಕಾರ್ಯಕ್ರಮದಲ್ಲಿ ಎಚ್‌ವಿಸಿ ರಾಷ್ಟ್ರೀಯ ಸಮಿತಿ ಕನ್ವೀನರ್ ಸಲೀಂ ಕನ್ಯಾಡಿ, ರಾಷ್ಟ್ರೀಯ ಸಮಿತಿ ಪ್ರ. ಕಾರ್ಯದರ್ಶಿ ಫಾರೂಖ್ ಕಾಟಿಪಳ್ಳ ಮತ್ತು ಎಚ್‌ವಿಸಿ ಕಾರ್ಯಕರ್ತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News