ಪಶ್ಚಿಮಬಂಗಾಳ ಪಂಚಾಯತ್ ಚುನಾವಣೆ ರದ್ದುಗೊಳಿಸಲು ಸುಪ್ರೀಂ ನಕಾರ

Update: 2018-08-24 16:32 GMT

ಹೊಸದಿಲ್ಲಿ, ಆ. 23: ಪಶ್ಚಿಮಬಂಗಾಳದ ಸ್ಥಳೀಯಾಡಳಿತದ ಪೈಕಿ ಸ್ಪರ್ಧೆಯೇ ಇಲ್ಲದೆ ಆಯ್ಕೆಯಾದ 20 ಸಾವಿರಕ್ಕೂ ಹೆಚ್ಚು ಚುನಾವಣೆ ಫಲಿತಾಂಶವನ್ನು ರದ್ದುಪಡಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ಆದರೆ, ಫಲಿತಾಂಶದಿಂದ ನೊಂದವರು ಇದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಿದೆ.

ಮೇಯಲ್ಲಿ ಟಿಎಂಸಿ ಅವಿರೋಧವಾಗಿ ಆಯ್ಕೆಯಾದ 20 ಸಾವಿರಕ್ಕೂ ಅಧಿಕ ಪಂಚಾಯತ್ ಸ್ಥಾನಗಳ ಫಲಿತಾಶದ ಅಧಿಸೂಚನೆಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.

ಇದೇ ಸಂದರ್ಭ ವ್ಯಾಟ್ಸ್ ಆ್ಯಪ್, ಇ-ಮೇಲ್ ಸೇರಿದಂತೆ ಇಲೆಕ್ಟ್ರಾನಿಕ್ಸ್ ಮಾಧ್ಯಮಗಳ ಮೂಲಕ ನಾಮಪತ್ರ ಸಲ್ಲಿಸಲು ಅವಕಾಶ ನೀಡಿದ್ದ ಕೋಲ್ಕತ್ತಾ ಉಚ್ಚ ನ್ಯಾಯಾಲಯದ ಆದೇಶವನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿದೆ. ತಮ್ಮ ಪಕ್ಷಗಳು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವುದಕ್ಕೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಅಡ್ಡಿ ಪಡಿಸಿದೆ ಎಂದು ಪ್ರತಿಪಕ್ಷ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News