ವಾಹನಗಳ ಗಾಜು ಜಖಂ ಪ್ರಕರಣ: ನಾಲ್ವರ ಬಂಧನ
Update: 2018-08-24 22:34 IST
ಬೆಂಗಳೂರು, ಆ.24: ರಸ್ತೆಬದಿ ನಿಲ್ಲಿಸಿದ್ದ ವಾಹನಗಳ ಗಾಜುಗಳನ್ನು ಜಖಂಗೊಳಿಸಿದ್ದ ಆರೋಪದ ಮೇಲೆ ನಾಲ್ಕು ಜನರನ್ನು ಬಂಧಿಸುವಲ್ಲಿ ನಗರದ ಕಾಮಾಕ್ಷಿಪಾಳ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ಯಾಸೀನ್(25), ಹನುಮಂತ (19), ದೀಪು (26), ಮೋನಿಷ್ ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಆ.13ರಂದು ರಾತ್ರಿ ಸಮಯದಲ್ಲಿ ನಗರದ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯ ಕಾವೇರಿಪುರ 4ನೆ ಮುಖ್ಯ ರಸ್ತೆ ಬಳಿ ನಿಲ್ಲಿಸಿದ್ದ ಸಾರ್ವಜನಿಕರ ವಾಹನಗಳ ಗಾಜು ಒಡೆದು ಪರಾರಿಯಾಗಿದ್ದರು. ಈ ಕುರಿತು ಕಾಮಾಕ್ಷಿಪಾಳ್ಯ ಪೊಲೀಸರು ಕಾರ್ಯಾಚರಣೆ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ.