ಯುಎಇಯಿಂದ ಕೇರಳಕ್ಕೆ 175 ಟನ್ ಪರಿಹಾರ ಸಾಮಗ್ರಿ

Update: 2018-08-25 10:17 GMT

ಕೊಚ್ಚಿ, ಆ.25: ಪ್ರವಾಹದಿಂದ ನಲುಗಿರುವ ಕೇರಳಕ್ಕೆ 175 ಟನ್ ಗಳಷ್ಟು ಪರಿಹಾರ ಸಾಮಗ್ರಿಗಳನ್ನು ನೀಡುವುದಾಗಿ ಯುಎಇ ಘೋಷಿಸಿದೆ. ಸುಮಾರು 100 ವರ್ಷಗಳಲ್ಲೇ ಅತ್ಯಂತ ಭೀಕರ ಪ್ರವಾಹವನ್ನು ಕೇರಳ ಎದುರಿಸಿದೆ. 300ಕ್ಕೂ ಅಧಿಕ ಮಂದಿ ಪ್ರವಾಹ ಭೂಕುಸಿತದಿಂದ ಮೃತಪಟ್ಟಿದ್ದಾರೆ.

“ಭಾರತದ ಕೇರಳಕ್ಕೆ ಎಮಿರೇಟ್ಸ್ ಸ್ಕೈಕಾರ್ಗೋ 175 ಟನ್ ಪರಿಹಾರ ಸಾಮಗ್ರಿಗಳನ್ನು ಒಯ್ಯಲಿದೆ. ಕೇರಳ ಜನತೆಯ ಜೊತೆ ಯುಎಇ ಇದೆ” ಎಂದು ಏರ್ ಲೈನ್ಸ್ ಇಂದು ಟ್ವೀಟ್ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News