ಸರಳ, ಸಜ್ಜನಿಕೆಗೆ ಇನ್ನೊಂದು ಹೆಸರು ಡಾ. ಎಪಿಜೆ ಅಬ್ದುಲ್ ಕಲಾಂ

Update: 2018-08-26 06:16 GMT

► 6 ಪ್ಯಾಂಟ್‌ಗಳು (ಅದರಲ್ಲಿ 2 DRDO ಸಮವಸ್ತ್ರ)

► 4 ಶರ್ಟ್‌ಗಳು (ಅದರಲ್ಲಿ 2 DRDO ಸಮವಸ್ತ್ರ)

► 3 ಸೂಟುಗಳು (1ಪಾಶ್ಚಿಮಾತ್ಯ, 2 ಭಾರತೀಯ)

► 2,500 ಪುಸ್ತಕಗಳು

► 1 ಫ್ಲಾಟ್ (ಆಗಲೇ ದೇಣಿಗೆ ಕೊಟ್ಟಿದ್ದು)

► 1 ಪದ್ಮಶ್ರೀ

► 1 ಪದ್ಮಭೂಷಣ

► 1 ಭಾರತ ರತ್ನ

► 16 ಡಾಕ್ಟರೇಟ್

► 1 ವೆಬ್‌ಸೈಟ್

► 1 ಟ್ವಿಟರ್ ಅಕೌಂಟ್

► 1 ಇ ಮೇಲ್ ಐಡಿ

ಅವರ ಬಳಿ ಟಿವಿ, ಏಸಿ, ಕಾರು, ಬಂಗಾರ, ಷೇರ್‌ಗಳು, ಭೂಮಿ ಅಥವಾ ಬ್ಯಾಂಕ್ ಬ್ಯಾಲೆನ್ಸ್ ಇರಲಿಲ್ಲ. ತಮ್ಮ ಎಂಟು ವರ್ಷದ ಪಿಂಚಣಿಯನ್ನು ತಮ್ಮ ಹಳ್ಳಿಯ ಅಭಿವೃದ್ಧಿಗಾಗಿ ನೀಡಿದ್ದರು.

ಇವು ರಾಷ್ಟ್ರಪತಿ ಅಬ್ದುಲ್ ಕಲಾಂ ನಿಧನರಾದಾಗ ಅವರು ಬಿಟ್ಟು ಹೋದ ಆಸ್ತಿಗಳು. ಈ ದೇಶದಲ್ಲಿ ಆಕಾರದಲ್ಲಿರುವಾಗ ತಲೆಮಾರಿಗೆ ಸಾಕಾಗುವಷ್ಟು ಸಂಪಾದಿಸುವಾಗ ಮತ್ತು ಅಕಾರ ಬಿಟ್ಟು ಹೋಗುವಾಗ ‘‘ಉಂಡೂ ಹೋದ ಕೊಂಡೂ ಹೋದ’’ ಎನ್ನುವ ಉದಾಹರಣೆಗಳನ್ನು ಕಾಣುವಾಗ ಅಬ್ದುಲ್ ಕಲಾಂರಂಥ ಸಜ್ಜನ ಮತ್ತು ಸರಳ ವ್ಯಕ್ತಿಗಳು ಕೋಟಿಯಲ್ಲಿ ಒಬ್ಬರು ಸಿಗುವುದು ಕಷ್ಟ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಈ ಮಾಹಿತಿಯನ್ನು ನೋಡಿದಾಗ ಈ ದೇಶ ಅವರಿಗೆ ರಾಷ್ಟ್ರಪತಿ ಹುದ್ದೆ ನೀಡಿ ಗೌರವಿಸಿದ್ದು ಸಾರ್ಥಕ ಅನಿಸುತ್ತದೆ.

Writer - ರಮಾನಂದ ಶರ್ಮಾ

contributor

Editor - ರಮಾನಂದ ಶರ್ಮಾ

contributor

Similar News