×
Ad

ಕೊಲೆ ಪ್ರಕರಣ: ಇಬ್ಬರ ಸೆರೆ

Update: 2018-08-26 22:35 IST

ಬೆಂಗಳೂರು, ಆ.26: ಮದ್ಯದಂಗಡಿಯಲ್ಲಿ ಚಂದ್ರಶೇಖರ್ ಎಂಬಾತನನ್ನು ಕೊಲೆಗೈದಿದ್ದ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ನಗರದ ಕುಮಾರಸ್ವಾಮಿ ಲೇಔಟ್ ಠಾಣಾ ಪೊಲೀಸರು ಬಂಧಿಸಿ, ತನಿಖೆ ಮುಂದುವರೆಸಿದ್ದಾರೆ.

ನಗರದ ಬನಶಂಕರಿ 2ನೇ ಹಂತ ಭವಾನಿ ನಗರದ ನದೀ್(27) ಹಾಗೂ ಫಯಾಝ್(27) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಆ.24ರಂದು ರಾತ್ರಿ ಚಂದ್ರಶೇಖರ್ ತನ್ನ ಸ್ನೇಹಿತರೊಂದಿಗೆ ಕದಿರೇನಹಳ್ಳಿ ಕ್ರಾಸ್‌ನಲ್ಲಿರುವ ಆರ್.ಕೆ.ಮದ್ಯದಂಗಡಿ ಮತ್ತು ರೆಸ್ಟೋರೆಂಟ್‌ಗೆ ಮದ್ಯಪಾನ ಮಾಡಲು ಬಂದಿದ್ದರು. ಮದ್ಯಪಾನ ಮಾಡಿ ಹಣ ನೀಡುವ ಸಂದರ್ಭದಲ್ಲಿ ಆರೋಪಿಗಳು ಕ್ಷುಲ್ಲಕ ವಿಚಾರಕ್ಕೆ ಜಗಳ ತೆಗೆದು ಚಾಕುವಿನಿಂದ ಚಂದ್ರಶೇಖರ್ ಅವರಿಗೆ ಇರಿದು ಪರಾರಿಯಾಗಿದ್ದರು ಎನ್ನಲಾಗಿದೆ.

ತೀವ್ರ ರಕ್ತಸ್ರಾವಕ್ಕೊಳಗಾದ ಚಂದ್ರಶೇಖರ್ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಮಾರ್ಗಮಧ್ಯೆ ಮೃತಪಟ್ಟಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಕುಮಾರಸ್ವಾಮಿ ಲೇಔಟ್ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಪರಾರಿಯಾಗಿರುವ ಇನ್ನಿಬ್ಬರು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News