ನೇಕಾರರಿಗೆ ಉಚಿತ ವಿದ್ಯುತ್
Update: 2018-08-26 22:41 IST
ಬೆಂಗಳೂರು, ಆ. 26: ವಿದ್ಯುತ್ ಸಂಪರ್ಕವಿದ್ದರೂ ನಿರಂತರ ವಿದ್ಯುತ್ ಕಡಿತದಿಂದ ಕಂಗೆಟ್ಟಿದ್ದ ಬಾಗಲಕೋಟೆಯ ಸಿದ್ದಾಪುರ ಗ್ರಾಮಸ್ಥರ ಬದುಕಿನಲ್ಲಿ ಸೋಲಾರ್ ವಿದ್ಯುತ್ ಒದಗಿಸುವ ಮೂಲಕ ಇವೊಲ್ಯೂಟ್ ಸಿಸ್ಟಮ್ಸ್ ಪ್ರೈ.ಲಿ. ಹೊಸ ಬೆಳಕು ಮೂಡಿಸಿದೆ.
ಸಿದ್ದಾಪುರ ಗ್ರಾಮದಲ್ಲಿನ ಬಹುತೇಕರು ನೇಕಾರಿಗೆ ವೃತ್ತಿಯಲ್ಲಿ ತೊಡಗಿದ್ದು, ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಕಷ್ಟ ಅನುಭವಿಸುತ್ತಿದ್ದರು. ಇದನ್ನು ಗಮನಿಸಿದ ನಮ್ಮ ಇವೊಲ್ಯೂಟ್ ಸಂಸ್ಥೆ ಮರುಬಳಕೆ ಮಾಡಬಹುದಾದ ಇಂಧನ ಮೂಲಕ ಬೆಳಕು ನೀಡಿದ್ದೇವೆ ಎಂದು ಸಿಇಓ ಪರಾಗ್ ಮೆಹ್ತಾ ಹೇಳಿದ್ದಾರೆ.
ನೇಕಾರರ ಕುಟುಂಬಗಳು ಈಗ ತಮ್ಮ ಕೆಲಸದ ಅವಧಿ ವಿಸ್ತರಿಸಿಕೊಂಡಿದ್ದು, ಆ ಮೂಲಕ ಹೆಚ್ಚುವರಿ ಆದಾಯ ಸಂಗ್ರಹಿಸುತ್ತಿದ್ದಾರೆ. ಗ್ರಾಮೀಣ ಭಾರತದ 31ದಶಲಕ್ಷ ಮನೆಗಳು ಇನ್ನೂ ಕತ್ತಲಿನಲ್ಲೇ ದಿನದೂಡುತ್ತಿದ್ದು, ಅವರ ಬದುಕಿನಲ್ಲಿಯೂ ಬೆಳಕು ಮೂಡಿಸುವ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.