2.50 ಲಕ್ಷ ರೂ.ಒಡವೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಕೆಎಸ್ಸಾರ್ಟಿಸಿ ಬಸ್ ಚಾಲಕ

Update: 2018-08-27 15:16 GMT

ಬೆಂಗಳೂರು, ಆ. 27: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ) ಬಸ್ಸಿನಲ್ಲಿ ಪ್ರಯಾಣಿಕರೊಬ್ಬರು ಬಿಟ್ಟು ಹೋಗಿದ್ದ 2.50ಲಕ್ಷ ರೂ.ಮೊತ್ತದ ಚಿನ್ನದ ಆಭರಣಗಳನ್ನು ಪ್ರಯಾಣಿಕರ ಟಿಕೆಟ್ ಆಧರಿಸಿ ಅವರನ್ನು ಪತ್ತೆ ಮಾಡಿ ಹಿಂದಿರುಗಿಸಿ ಪ್ರಾಮಾಣಿಕತೆ ಮರೆದಿದ್ದಾರೆ.

ಚಾಮರಾಜನಗರ ವಿಭಾಗ ಕೊಳ್ಳೇಗಾಲ ಘಟಕದ ಚಾಲಕ ಕಂ ನಿರ್ವಾಹಕ ಜಯದೇವ ಆ.26ರಂದು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಕೊಳ್ಳೇಗಾಲದಿಂದ ಬೆಂಗಳೂರಿಗೆ ಬರುವ ಮಾರ್ಗಮಧ್ಯೆದಲ್ಲಿ, ಮಳವಳ್ಳಿಯಿಂದ ಚನ್ನಪಟ್ಟಣಕ್ಕೆ ಬಂದ 4 ಮಂದಿ ಪ್ರಯಾಣಿಕರು ಸುಮಾರು 2.50ಲಕ್ಷ ರೂ.ಮೌಲ್ಯದ 2 ಚಿನ್ನದ ಸರಗಳು, 2 ಕಿವಿಯೊಲೆ, ಜುಮುಕಿ, ಒಂದು ಮೂಗುತಿಯನ್ನು ಮರೆತು ಬಸ್ಸಿನಲ್ಲಿ ಬಿಟ್ಟು ಚನ್ನಪಟ್ಟಣದಲ್ಲಿ ಇಳಿದು ಹೋಗಿದ್ದರು.

ಬಸ್ಸನ್ನು ತಪಾಸಣೆ ಮಾಡಿದ ವೇಳೆ ಈ ಚಿನ್ನದ ಒಡವೆಗಳು ಚಾಲಕ ಕಂ ನಿರ್ವಾಹಕರ ಕೈಗೆ ಸಿಕ್ಕಿದವು. ಬೆಂಗಳೂರಿನ ಸ್ಯಾಟ್‌ಲೈಟ್ ನಿಲ್ದಾಣದ ಮೇಲ್ವಿಚಾರಕರಿಗೆ ಮತ್ತು ಘಟಕ ವ್ಯವಸ್ಥಾಪಕರಿಗೆ ಸುದ್ಧಿ ತಿಳಿಸಿ, ಟಿಕೆಟ್ ಮೂಲಕ ಪ್ರಯಾಣಿಕರ ಗುರುತು ಪತ್ತೆ ಹಚ್ಚಿ, ಚಿನ್ನದ ಒಡವೆಗಳನ್ನು ಅವರಿಗೆ ಒಪ್ಪಿಸಿದ್ದಾರೆ ಎಂದು ಕೆಎಸ್ಸಾರ್ಟಿಸಿ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News