×
Ad

ಸರಕಾರಗಳಿಂದ ದಲಿತ ಕ್ರೈಸ್ತರ ನಿರ್ಲಕ್ಷ್ಯ: ಆರೋಪ

Update: 2018-08-27 22:55 IST

ಬೆಂಗಳೂರು, ಆ. 27: ಕರ್ನಾಟಕದಲ್ಲಿ ದಲಿತ ಕ್ರೈಸ್ತರು ಸತತವಾಗಿ ಸರಕಾರಗಳಿಂದ ನಿರ್ಲಕ್ಷಿಸಲ್ಪಟ್ಟಿದ್ದಾರೆ ಎಂದು ಕರ್ನಾಟಕ ದಲಿತ ಕಥೋಲಿಕ ಕ್ರೈಸ್ತ ರಕ್ಷಣಾ ವೇದಿಕೆ ಕಾರ್ಯದರ್ಶಿ ಎಸ್.ವೆಟ್ರಿ ಸೆಲ್ವನ್ ಹೇಳಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತ ಕ್ರೈಸ್ತರು ಎಲ್ಲೂ ಸಲ್ಲದಂತೆ ಆಗಿದ್ದಾರೆ. ಚುನಾವಣೆ ಸಮಯದಲ್ಲಿ ಮತ ಕೇಳಲು ಬರುವ ನಾಯಕರು ಚುನಾಯಿತರಾದ ಮೇಲೆ ನಮ್ಮನ್ನು ಮರೆತು ಬಿಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾಂಗ್ರೆಸ್‌ನಂತ ಜಾತ್ಯತೀತ ಪಕ್ಷಗಳನ್ನು ನಾವು ಅನುಸರಿಸುತ್ತಿದ್ದು, ಯಾವುದೆ ಪಕ್ಷಗಳಲ್ಲಿ ನಮಗೆ ಎರಡನೆ ದರ್ಜೆಯ ಸ್ಥಾನ ಮಾನವನ್ನು ನೀಡಿಲ್ಲ. ಕೇರಳ ಹಾಗೂ ಕರಾವಳಿ ಪ್ರದೇಶಗಳಲ್ಲಿ ನೀಡಿರುವ ಮಾನ್ಯತೆಯನ್ನು ನೀಡದೆ. ನಮಗೆ, ಪ್ರಾದೇಶಿಕವಾಗಿಯೂ ತಾರತಮ್ಯವಾಗುತ್ತಿದೆ ಎಂದರು.

ಸರಕಾರದ ಸಂಸ್ಥೆಗಳಲ್ಲಿ ದಲಿತ ಕ್ರಿಶ್ಚಿಯನ್‌ರಿಗೆ ಪ್ರಾತಿನಿಧ್ಯ ದೊರಕಿಸಿ, ವಿಧಾನ ಪರಿಷತ್ತಿನ ಸದಸ್ಯರನ್ನಾಗಿ ಆಯ್ಕೆ ಮಾಡಬೇಕು. ಮಕ್ಕಳ ಹಕ್ಕುಗಳ ರಕ್ಷಣೆಯ ಕರ್ನಾಟಕ ರಾಜ್ಯ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ದಲಿತ ಕ್ರಿಶ್ಚಿಯನ್ ಮಹಿಳೆಯನ್ನು ಪರಿಗಣಿಸಬೇಕು ಎಂಬ ಬೇಡಿಕೆಗಳನ್ನು ಎಸ್.ವೆಟ್ರಿ ಸೆಲ್ವನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News