ಈ ವರ್ಷ ದುಬೈ ವಿಮಾನ ನಿಲ್ದಾಣಕ್ಕೆ 100ನೇ ಕೋಟಿಯ ಪ್ರಯಾಣಿಕ

Update: 2018-08-27 18:02 GMT

ದುಬೈ, ಆ. 27: ಯುಎಇಯ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ತನ್ನ 100ನೇ ಕೋಟಿಯ ಪ್ರಯಾಣಿಕನನ್ನು ಸ್ವಾಗತಿಸಲು ಸಜ್ಜಾಗಿದೆ ಎಂದು ದುಬೈ ಮಾಧ್ಯಮ ಕಚೇರಿ ತಿಳಿಸಿದೆ.

ಅದರ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಘೋಷಣೆಯನ್ನು ಮಾಡಲಾಗಿದೆ.

2017ರಲ್ಲಿ ಸುಮಾರು 9 ಕೋಟಿ ಪ್ರಯಾಣಿಕರು 1960ರ ದಶಕದಲ್ಲಿ ಸ್ಥಾಪನೆಯಾದ ವಿಮಾನ ನಿಲ್ದಾಣದ ಮೂಲಕ ಹಾದುಹೋಗಿದ್ದಾರೆ.

ಅಂಕಿಅಂಶಗಳ ಪ್ರಕಾರ, 2017ರಲ್ಲಿ ಅಮೆರಿಕದ ಜಾರ್ಜಿಯದಲ್ಲಿರುವ ಹಾರ್ಟ್ಸ್‌ಫೀಲ್ಡ್ ಜಾಕ್ಸನ್ ಅಟ್ಲಾಂಟ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣವು ಅತ್ಯಂತ ದಟ್ಟಣೆಯ ವಿಮಾನ ನಿಲ್ದಾಣವಾಗಿದೆ. ಆ ವಿಮಾನ ನಿಲ್ದಾಣದ ಮೂಲಕ 10.4 ಕೋಟಿ ಪ್ರಯಾಣಿಕರು ಹಾದು ಹೋಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News