ಶೀಘ್ರವೇ ನಿಲ್ದಾಣಗಳಲ್ಲಿ ವೈ-ಫೈ, ರೈಲುಗಳಲ್ಲಿ ಬಯೊ ವ್ಯಾಕ್ಯೂಮ್ ಟಾಯ್ಲೆಟ್‌ಗಳು: ಗೋಯಲ್

Update: 2018-08-28 14:33 GMT

ಹೊಸದಿಲ್ಲಿ,ಆ.28: ದೇಶಾದ್ಯಂತ 6,000 ರೈಲು ನಿಲ್ದಾಣಗಳಲ್ಲಿ ಶೀಘ್ರವೇ ವೈ-ಫೈ ಸೌಲಭ್ಯವನ್ನು ಸ್ಥಾಪಿಸಲಾಗುವುದು ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಮಂಗಳವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಈ ಸೌಲಭ್ಯವು ಪ್ರಯಾಣಿಕರಿಗೆ ಸುಗಮ ಪ್ರಯಾಣಕ್ಕೆ ನೆರವಾಗುವುದು ಮಾತ್ರವಲ್ಲ,ಅವರು ಕೃಷಿ,ಬೋಧನೆಯಂತಹ ತಮ್ಮ ವೃತ್ತಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಳನ್ನು ಪಡೆಯಲೂ ಪೂರಕವಾಗಲಿದೆ ಎಂದು ಹೇಳಿದರು.

ಪ್ರಯಾಣಿಕ ವಿಮಾನಗಳಲ್ಲಿರುವಂತೆ ರೈಲುಗಳಲ್ಲಿಯೂ ಬಯೊ ವ್ಯಾಕ್ಯೂಮ್ ಟಾಯ್ಲೆಟ್‌ಗಳನ್ನು ಶೀಘ್ರವೇ ಸ್ಥಾಪಿಸಲಾಗುವುದು ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು,ರೈಲ್ವೆಗಾಗಿ ಸಹಾಯವಾಣಿಯನ್ನು ಸ್ಥಾಪಿಸುವ ಯೋಜನೆಯು ಇನ್ನೂ ಆರಂಭದ ಹಂತದಲ್ಲಿದ್ದು,ತಾಂತ್ರಿಕ ಸಮಸ್ಯೆಗಳಿಂದಾಗಿ ಸ್ಥಗಿತಗೊಂಡಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News