ಮದೀನಾ ಯಾತ್ರಿಕರಿಗೆ 5 ಲಕ್ಷ ಊಟ ವಿತರಣೆ

Update: 2018-08-28 17:56 GMT

ಜಿದ್ದಾ, ಆ. 28: ಹಜ್ ನಂತರದ ಋತುವಿನಲ್ಲಿ ಪವಿತ್ರ ನಗರ ಮದೀನಾಕ್ಕೆ ಭೇಟಿ ನೀಡುವ ಯಾತ್ರಿಕರಿಗೆ 5 ಲಕ್ಷ ಊಟ ಮತ್ತು 6 ಲಕ್ಷ ನೀರಿನ ಬಾಟಲಿಗಳನ್ನು ವಿತರಿಸುವ ಕಾರ್ಯವನ್ನು ಮದೀನಾ ಚಾರಿಟಿ ಸೊಸೈಟಿ ಆರಂಭಿಸಿದೆ.

ಹಜ್ ಪೂರ್ಣಗೊಳಿಸಿದ ಬಳಿಕ, ಹೆಚ್ಚಿನ ಯಾತ್ರಿಕರು ಮಕ್ಕಾ ಮತ್ತು ಮದೀನಾ ನಗರಗಳಲ್ಲಿರುವ ಐತಿಹಾಸಿಕ ಮಹತ್ವದ ಸ್ಥಳಗಳಿಗೆ ಭೇಟಿ ನೀಡುತ್ತಾರೆ.

ಹೆಚ್ಚಿನವರು, ಅದರಲ್ಲೂ ಮುಖ್ಯವಾಗಿ ಸಂಶೋಧಕರು ಮತ್ತು ವಿದ್ಯಾರ್ಥಿಗಳು ಸೌದಿ ಅರೇಬಿಯದ ಐತಿಹಾಸಿಕ ಸ್ಥಳಗಳ ಇತಿಹಾಸವನ್ನು ತಿಳಿದುಕೊಳ್ಳುವ ಆಸಕ್ತಿ ಹೊಂದಿದ್ದಾರೆ ಹಾಗೂ ಇಲ್ಲಿಗೆ ಹಜ್ ಋತುವಿನಲ್ಲಿ ಲಕ್ಷಾಂತರ ಯಾತ್ರಿಕರು ಭೇಟಿ ನೀಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News