ಆನ್‌ಲೈನ್‌ನಲ್ಲಿ ವೋಟರ್ ಐಡಿಗೆ ನೋಂದಣಿ, ಮತದಾರರ ಪಟ್ಟಿಯಲ್ಲಿ ವಿವರಗಳನ್ನು ಅಪ್‌ಡೇಟ್ ಮಾಡುವುದು ಹೇಗೆ?

Update: 2018-08-30 10:18 GMT

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಸೇರಿಸಬೇಕಿದ್ದರೆ ಅಥವಾ ನಿಮ್ಮ ಮತದಾರರ ಗುರುತಿನ ಚೀಟಿಯಲ್ಲಿ ಏನಾದರೂ ತಿದ್ದುಪಡಿ ಮಾಡಿಸಬೇಕಿದ್ದರೆ ನೀವೀಗ ಚುನಾವಣಾ ಕಚೇರಿಗೆ ಅಲೆದಾಡಬೇಕಿಲ್ಲ, ಈ ಕೆಲಸವನ್ನು ಮನೆಯಲ್ಲಿಯೇ ಕುಳಿತು ಆನ್‌ಲೈನ್‌ನಲ್ಲಿ ಸುಲಭವಾಗಿ ಮಾಡಬಹುದು. ಚುನಾವಣಾ ಆಯೋಗದ ವೆಬ್‌ಸೈಟ್‌ಗೆ ಲಾಗ್-ಆನ್ ಆಗಿ ಅಲ್ಲಿರುವ ನಿಗದಿತ ಫಾರ್ಮ್‌ನಲ್ಲಿ ವಿವರಗಳನ್ನು ತುಂಬಿ ಹೊಸ ಹೆಸರಿನ ಸೇರ್ಪಡೆಗೆ ಅಥವಾ ತಿದ್ದುಪಡಿಗಳಿಗೆ ಕೋರಿದರಾಯಿತು.

ಪ್ರತಿ ಚುನಾವಣೆಗೂ ಮುನ್ನ ಮತದಾರರ ಪಟ್ಟಿಯನ್ನು ಪರಿಷ್ಕರಿಸಲಾಗುತ್ತದೆ. ಹೀಗಾಗಿ ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ ಮುನ್ನ ಮತದಾರರು ಆನ್‌ಲೈನ್ ಅಪ್ಡೇಷನ್ ಸೌಲಭ್ಯವನ್ನು ಪಡೆದುಕೊಳ್ಳಬಹುದು.

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಅಪ್ಡೇಟ್ ಮಾಡಲು ಸಂಪೂರ್ಣ ಆನ್‌ಲೈನ್ ಪ್ರಕ್ರಿಯೆ ಹೀಗಿದೆ:

ಚುನಾವಣಾ ಆಯೋಗದ ವೆಬ್‌ಸೈಟ್ http://www.nvsp.in ಗೆ ಭೇಟಿ ನೀಡಿ ಮತ್ತು ನಿಮ್ಮ ದಾಖಲೆಗಳನ್ನು ಅಪ್‌ಲೋಡ್ ಮಾಡಿ. ಅಪ್ಡೇಷನ್‌ಗೆ ಅಗತ್ಯವಿರುವ ದಾಖಲೆಗಳು:

ಒಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ

ಗುರುತಿನ ಪುರಾವೆ-ಜನನ ಪ್ರಮಾಣಪತ್ರ,ಪಾಸ್‌ಪೋರ್ಟ್,ವಾಹನ ಚಾಲನಾ ಪರವಾನಿಗೆ,ಪಾನ್ ಕಾರ್ಡ್ ಅಥವಾ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ವಿಳಾಸದ ಪುರಾವೆ-ಪಡಿತರ ಚೀಟಿ,ಪಾಸ್‌ಪೋರ್ಟ್,ವಾಹನ ಚಾಲನಾ ಪರವಾನಿಗೆ,ಫೋನ್ ಅಥವಾ ವಿದ್ಯುತ್ ಬಿಲ್

ವೆಬ್‌ಸೈಟ್‌ನಲ್ಲಿರುವ ಅರ್ಜಿ ನಮೂನೆಯಲ್ಲಿ ಎಲ್ಲ ಅಗತ್ಯ ಮಾಹಿತಿಗಳನ್ನು ತುಂಬಿ ಸಲ್ಲಿಸಿದರೆ ಅಪ್ಡೇಷನ್‌ನ ವಿವರಗಳು ಮತ್ತು ಅರ್ಜಿಯ ಐಡಿಯನ್ನೊಳಗೊಂಡ ಇ-ಮೇಲ್ ನಿಮ್ಮ ಮೇಲ್‌ಬಾಕ್ಸ್‌ಗೆ ಬರುತ್ತದೆ. ಅರ್ಜಿಯ ಐಡಿ ಮೂಲಕ ನೀವು ನಿಮ್ಮ ಅರ್ಜಿಯ ಸ್ಥಿತಿಗತಿಯನ್ನು ಪರಿಶೀಲಿಸಬಹುದು.

ಒಂದು ತಿಂಗಳ ಅವಧಿಯೊಳಗೆ ನಿಮ್ಮ ವೋಟರ್‌ಐಡಿ ಬಿಡುಗಡೆಯಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News