ಏಶ್ಯನ್ ಗೇಮ್ಸ್:ಸೆಮಿಫೈನಲ್ ನಲ್ಲಿ ಪೆನಾಲ್ಟಿ ಶೂಟೌಟ್ ನಲ್ಲಿ ಭಾರತದ ಹಾಕಿ ತಂಡಕ್ಕೆ ಸೋಲು

Update: 2018-08-30 13:08 GMT

ಜಕಾರ್ತ, ಆ.30: ಮಲೇಷ್ಯಾ ವಿರುದ್ಧ ಭಾರತದ ಪುರುಷರ ಹಾಕಿ ತಂಡ ಏಶ್ಯನ್ ಗೇಮ್ಸ್ ನ ಸೆಮಿಫೈನಲ್ ನಲ್ಲಿ ಗುರುವಾರ ಸೋಲು ಅನುಭವಿಸಿದೆ.

ಸೆಮಿಫೈನಲ್ ಪಂದ್ಯ 2-2 ಗೋಲುಗಳಿಂದ ಡ್ರಾದಲ್ಲಿ  ಕೊನೆಗೊಂಡಿತ್ತು. ಫಲಿತಾಂಶ ನಿರ್ಧರಿಸಲು ಬಳಿಕ ನಡೆದ ಪೆನಾಲ್ಟಿ ಶೂಟೌಟ್ ನಲ್ಲಿ ಭಾರತ 7-6 ಅಂತರದಲ್ಲಿ ಸೋಲು ಅನುಭವಿಸಿತು. ಕೊನೆಯಲ್ಲಿ ಭಾರತದ ಎಸ್ ವಿ ಸುನೀಲ್ ಚೆಂಡನ್ನು ಗುರಿಯತ್ತ ತಲುಪಿಸಲು ಎಡವಿದ ಕಾರಣದಿಂದಾಗಿ ಮಲೇಶ್ಯಾ ಗೆಲುವಿನ ನಗೆ ಬೀರಿತು. ಹಾಲಿ ಚಾಂಪಿಯನ್ ಭಾರತ ಸೆಮಿಫೈನಲ್ ನಲ್ಲೇ ತನ್ನ ಗೆಲುವಿನ ಅಜೇಯ ಓಟವನ್ನು  ಕೊನೆಗೊಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News