‘ವೈಜ್ಞಾನಿಕ ಶಿಕ್ಷಣದ ಮೂಲಕ ದೇಶದ ಪ್ರಗತಿ ಸಾಧ್ಯ’
Update: 2018-08-30 21:17 IST
ಬೆಂಗಳೂರು, ಆ. 30: ಆಧುನಿಕ ತಾಂತ್ರಿಕತೆ ಹಾಗೂ ವೈಜ್ಞಾನಿಕ ಶಿಕ್ಷಣ ಪಡೆಯುವ ಮೂಲಕ ಯುವ ಸಮೂಹ ದೇಶದ ಪ್ರಗತಿ ಹಾಗೂ ಬದಲಾವಣೆಗೆ ಮುಂದಾಗಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕಿ ಫಿಲೋಮಿನಾ ಲೋಬೋ ಕರೆ ನೀಡಿದ್ದಾರೆ.
ಗುರುವಾರ ಇಲ್ಲಿನ ಮಲ್ಲೇಶ್ವರಂನಲ್ಲಿ ನೂತನ ವಿನ್ಯಾಸದ ಡಿಸೈನ್ ಎಕ್ಸ್ಟೀರಿಯನ್ಸ್ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ವಿದ್ಯಾರ್ಥಿಗಳಿಗೆ ಉತ್ತಮ ಬೋಧನಾ ತರಬೇತಿ ನೀಡಬೇಕು. ಶಿಕ್ಷಕರಿಗೆ ಕರಕುಶಲ ತರಬೇತಿ ನೀಡುತ್ತಿರುವುದು ಪ್ರಶಂಸನೀಯ ಎಂದರು.
ಹೊಸದಿಲ್ಲಿ ಐಐಟಿ ಡಿಸೈನರ್ ಉಮೇಶ್‌ಕುಮಾರ್, ಕಲೆ-ಕರಕುಶಲತೆಯೂ ವಿದ್ಯಾರ್ಥಿಗಳ ಉನ್ನತ ಮಟ್ಟದ ಸಂಶೋಧನಾ ಮತ್ತು ಅಭಿವೃದ್ದಿ ಹಾಗೂ ಉತ್ತಮ ಉದ್ಯೋಗಗಳಲ್ಲಿ ತೊಡಗಿಕೊಳ್ಳಲು ಹೆಚ್ಚಿನ ಅನುಕೂಲವಾಗಲಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.