20 ಸೆಕೆಂಡ್ ತಡವಾಗಿದ್ದರೆ ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನ ಪತನಗೊಳ್ಳುವ ಸಾಧ್ಯತೆ ಇತ್ತು: ಡಿಜಿಸಿಎ

Update: 2018-08-31 05:49 GMT

 ಬೆಂಗಳೂರು, ಆ.31: ಇಪ್ಪತ್ತು ಸೆಕೆಂಡ್  ತಡವಾಗಿದ್ದರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನ ಅಪಘಾತಕ್ಕೀಡಾಗುವ ಸಾಧ್ಯತೆ ಇತ್ತು ಎಂಬ ಮಾಹಿತಿಯನ್ನು  ನಾಗರಿಕ ವಿಮಾನಯಾನ ನಿರ್ದೇಶನಾಲಯದ (ಡಿಜಿಸಿಎ) ವರದಿ ಬಹಿರಂಗಪಡಿಸಿದೆ.

ರಾಹುಲ್ ಗಾಂಧಿ ಎಪ್ರಿಲ್ 26ರಂದು ಕರ್ನಾಟಕದಲ್ಲಿ ಚುನಾವಣಾ ಪ್ರಚಾರಕ್ಕೆ ಹುಬ್ಬಳ್ಳಿಗೆ ಆಗಮಿಸುತ್ತಿದ್ದ ವೇಳೆ ಅವರು ಪ್ರಯಾಣಿಸುತ್ತಿದ್ದ  ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಆಗ ಪೈಲೆಟ್ ತುರ್ತಾಗಿ ವಿಮಾನವನ್ನು ಭೂಸ್ಪರ್ಶ  ಮಾಡಿದ್ದರು.ಇದರಿಂದಾಗಿ ಭಾರೀ ದುರಂತದಿಂದ ರಾಹುಲ್ ಗಾಂಧಿ ಪಾರಾಗಿದ್ದರು.

ಭೂಮಿಯಿಂದ 8 ಸಾವಿರ ಅಡಿ ಎತ್ತರದಲ್ಲಿ ಹಾರಾಡುತ್ತಿದ್ದ ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ  ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು  ಇದ್ದಕಿದ್ದಂತೆ ವಿಮಾನ ಒಂದು ಬದಿಗೆ ವಾಲಿತ್ತು. ಒಂದು ವೇಳೆ 20 ಸೆಕೆಂಡಿನಲ್ಲಿ ತಾಂತ್ರಿಕ ದೋಷ ಸರಿಯಾಗದೆ ಇರುತ್ತಿದ್ದರೆ ವಿಮಾನ ಪತನಗೊಳ್ಳುವ ಸಾಧ್ಯತೆ ಇತ್ತು ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯದ ವರದಿ  ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News