ತಂಬಾಕು ಉತ್ಪನ್ನಗಳ ಮೇಲೆ ಶೇ.85ರಷ್ಟು ಚಿತ್ರಸಹಿತ ಎಚ್ಚರಿಕೆ ಸಂದೇಶ: ಮಧ್ಯಂತರ ತಡೆಗೆ ನಿರಾಕರಿಸಿದ ಹೈಕೋರ್ಟ್

Update: 2018-08-31 16:26 GMT

ಬೆಂಗಳೂರು, ಆ.31: ಸೆ.1ರಿಂದ ಜಾರಿಯಾಗುವಂತೆ ಬೀಡಿ, ಸಿಗರೇಟ್ ಸೇರಿದಂತೆ ಎಲ್ಲ ತಂಬಾಕು ಉತ್ಪನ್ನಗಳ ಪ್ಯಾಕೆಟ್ ಮೇಲೆ ಶೇ.85ರಷ್ಟು ಚಿತ್ರಸಹಿತ ಎಚ್ಚರಿಕೆ ಸಂದೇಶ ಮುದ್ರಿಸುವುದನ್ನು ಕಡ್ಡಾಯಗೊಳಿಸಿ ಕೇಂದ್ರ ಸರಕಾರ ಹೊರಡಿಸಿರುವ ಅಧಿಸೂಚನೆಗೆ ಮಧ್ಯಂತರ ತಡೆಯಾಜ್ಞೆ ನೀಡಲು ಹೈಕೋರ್ಟ್ ನಿರಾಕರಿಸಿದೆ.

ಕೇಂದ್ರ ಸರಕಾರದ ಅಧಿಸೂಚನೆ ಪ್ರಶ್ನಿಸಿ ಹೈಕೋರ್ಟ್‌ಗೆ ತಕರಾರು ಅರ್ಜಿಗಳನ್ನು ಸಲ್ಲಿಸಿರುವ ಐಟಿಸಿ ಲಿಮಿಟೆಡ್ ಹಾಗೂ ಮತ್ತಿತರರು ತಂಬಾಕು ಉತ್ಪನ್ನಗಳ ಕಂಪೆನಿಗಳು, ಇದೇ ವಿಚಾರ ಕುರಿತು 2014ರಲ್ಲಿ ಹೊರಡಿಸಿದ್ದ ಮೂಲ ಅಧಿಸೂಚನೆಯನ್ನು ಪ್ರಶ್ನಿಸಿರುವ ಅರ್ಜಿಗಳು ಇನ್ನೂ ಸುಪ್ರೀಂಕೋರ್ಟ್‌ನಲ್ಲಿ ಬಾಕಿಯಿದೆ. ಈ ಹಂತದಲ್ಲೇ ಕೇಂದ್ರ ಸರಕಾರ ಹೊಸ ಅಧಿಸೂಚನೆ ಹೊರಡಿಸಿರುವುದು ಕಾನೂನು ಬಾಹಿರವಾಗಿದ್ದು, ಅದರ ಜಾರಿಗೆ ತಡೆ ನೀಡಬೇಕು ಎಂದು ಕೋರಿದ್ದವು.

ಶುಕ್ರವಾರ ಈ ಅರ್ಜಿ ಸಂಬಂಧ ಕೆಲಕಾಲ ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿದ್ದ ಏಕಸದಸ್ಯಪೀಠ, ಇದೇ ವಿಚಾರವು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿಯಿದೆ. ಅಲ್ಲದೆ, ಸುಪ್ರೀಂಕೋರ್ಟ್ ಸಹ ಮಧ್ಯಂತರ ಆದೇಶ ನೀಡಲು ಈಗಾಗಲೇ ನಿರಾಕರಿಸಿದೆ. ಹೀಗಾಗಿ, ಕೇಂದ್ರ ಸರಕಾರದ ಅಧಿಸೂಚನೆ ಜಾರಿಯಲ್ಲಿ ಹೈಕೋರ್ಟ್ ಮಧ್ಯಪ್ರವೇಶಿಸುವುದಿಲ್ಲ ಎಂದು ಅಭಿಪ್ರಾಯಪಟ್ಟು, ಅಧಿಸೂಚನೆಗೆ ಮಧ್ಯಂತರ ತಡೆಯಾಜ್ಞೆ ನೀಡಲು ನಿರಾಕರಿಸಿತು.

ಪ್ರಕರಣವೇನು: ತಂಬಾಕು ಉತ್ಪನ್ನಗಳ ಪ್ಯಾಕೆಟ್‌ನ ಎರಡೂ ಕಡೆಯಲ್ಲಿ ಶೇ.85ರಷ್ಟು ಚಿತ್ರ ಸಹಿತ ಎಚ್ಚರಿಕೆ ಸಂದೇಶ ಮುದ್ರಿಸುವುದನ್ನು ಕಡ್ಡಾಯಗೊಳಿಸಿ 2014ರಲ್ಲಿ ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಿತ್ತು. ಅದನ್ನು ಪ್ರಶ್ನಿಸಿ ಐಟಿಸಿ ಸೇರಿದಂತೆ ಹಲವು ತಂಬಾಕು ಕಂಪೆನಿಗಳು ಕರ್ನಾಟಕ ಹೈಕೋರ್ಟ್, ಮುಂಬೈ ಹೈಕೋರ್ಟ್ ಸೇರಿದಂತೆ ದೇಶದ ವಿವಿಧ ಹೈಕೋರ್ಟ್‌ಗಳಲ್ಲಿ ಸುಮಾರು 60 ಅರ್ಜಿಗಳನ್ನು ಸಲ್ಲಿಸಿದ್ದವು. ತದನಂತರ ಸುಪ್ರೀಂ ಕೋರ್ಟ್, ಎಲ್ಲ ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್‌ಗೆ ವರ್ಗಾಯಿಸಿತ್ತು.

ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠವು, ಶೇ.85ರಷ್ಟು ಚಿತ್ರ ಸಹಿತ ಮಿಲಿಯನ್ಸ್ ಮತ್ತಿತರ ಸರಕಾರೇತರ ಸಂಸ್ಥೆಗಳು ಸಲ್ಲಿಸಿದ್ದ ಮೇಲ್ಮನವಿಗಳ ವಿಚಾರಣೆ ನಡೆಸಿದ್ದ ಸುಪ್ರೀಂಕೊರ್ಟ್ 2018ರ ಜ.8ರಂದು ಕರ್ನಾಟಕ ಹೈಕೋರ್ಟ್ ತೀರ್ಪಿಗೆ ತಡೆ ನೀಡಿತ್ತು. ಈ ವಿಚಾರವು ಇನ್ನೂ ವಿಚಾರಣೆಗೆ ಬಾಕಿಯಿರುವಾಗಲೇ, ಸೆ.1, 2018ರಿಂದ ಜಾರಿಗೆ ಬರುವಂತೆ ಹೊಸ ಚಿತ್ರ ಸಹಿತ ಶೇ.85ರಷ್ಟು ಎಚ್ಚರಿಕೆ ಸಂದೇಶ ಮುದ್ರಿಸುವುದನ್ನು ಕಡ್ಡಾಯಗೊಳಿಸಿತ್ತು ಕೇಂದ್ರ ಸರಕಾರವು ಎ.3ರಂದು ಆದೇಶಿಸಿತ್ತು. ಈ ಅಧಿಸೂಚನೆಯನ್ನು ಪ್ರಶ್ನಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News