ಭಾರತದ ಮಹಿಳಾ ಸ್ಕ್ವಾಷ್ ತಂಡ ಫೈನಲ್‌ಗೆ

Update: 2018-09-01 05:05 GMT

ಜಕಾರ್ತ, ಸೆ.1: ಸ್ಟಾರ್ ಆಟಗಾರ್ತಿಯರಾದ ದೀಪಿಕಾ ಪಲ್ಲಿಕಲ್ ಹಾಗೂ ಜೋಶ್ನಾ ಚಿನ್ನಪ್ಪ ನೇತೃತ್ವದ ಭಾರತದ ಮಹಿಳಾ ಸ್ಕ್ವಾಷ್ ತಂಡ ಏಶ್ಯನ್ ಗೇಮ್ಸ್‌ನಲ್ಲಿ ಹಾಲಿ ಚಾಂಪಿಯನ್ ಮಲೇಶ್ಯಾ ತಂಡವನ್ನು ಮಣಿಸುವ ಮೂಲಕ ಸತತ 2ನೇ ಬಾರಿ ಫೈನಲ್ ಸುತ್ತಿಗೆ ತಲುಪಿದೆ.

ಶುಕ್ರವಾರ ಇಲ್ಲಿ ನಡೆದ ಸೆಮಿ ಫೈನಲ್‌ನ ಮೊದಲ ಸಿಂಗಲ್ಸ್ ಪಂದ್ಯದಲ್ಲಿ ಜೋಶ್ನಾ ಏಶ್ಯನ್ ಗೇಮ್ಸ್ ಚಾಂಪಿಯನ್ ನಿಕೊಲ್ ಡೇವಿಡ್‌ರನ್ನು 12-10, 11-9, 6-11, 10-12, 11-9 ಅಂತರದಿಂದ ಸೋಲಿಸಿದ್ದಾರೆ. ದೀಪಿಕಾ ಮತ್ತೊಂದು ಪಂದ್ಯದಲ್ಲಿ ಲೊ ವೀ ವೆರ್ನ್‌ರನ್ನು 3-0 (11-2, 11-9, 11-2)ಅಂತರದಿಂದ ಸೋಲಿಸಿ ಭಾರತಕ್ಕೆ 2-0 ಅಂತರದ ಗೆಲುವು ತಂದರು.

ಉದಯೋನ್ಮುಖ ಆಟಗಾರ್ತಿ ಯರಾದ ತನ್ವಿ ಖನ್ನಾ ಹಾಗೂ ಸುನಯನಾ ಕುರುವಿಲ್ಲಾ ಭಾರತ ಸ್ಕ್ವಾಷ್ ತಂಡ ಸತತ 2ನೇ ಬಾರಿ ಫೈನಲ್‌ಗೆ ತಲುಪಲು ಕಾಣಿಕೆ ನೀಡಿದ್ದಾರೆ.

ಭಾರತದ ಮಹಿಳಾ ತಂಡ 2014ರ ಆವೃತ್ತಿಯ ಏಶ್ಯನ್ ಗೇಮ್ಸ್‌ನ ಮಹಿಳೆಯರ ಟೀಮ್ ಇವೆಂಟ್ ಫೈನಲ್‌ನಲ್ಲಿ ಮಲೇಶ್ಯಾಕ್ಕೆ ಸೋಲುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತ್ತು. ಭಾರತ ಶನಿವಾರ ನಡೆಯಲಿರುವ ಫೈನಲ್‌ನಲ್ಲಿ ಹಾಂಕಾಂಗ್ ತಂಡವನ್ನು ಎದುರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News