ಏಶ್ಯನ್ ಗೇಮ್ಸ್‌: ಪದಕ ಗಳಿಕೆಯಲ್ಲಿ ಭಾರತ ಉತ್ತಮ ಸಾಧನೆ

Update: 2018-09-01 09:26 GMT

ಜಕಾರ್ತ,ಸೆ.1: ಇಂಡೋನೇಶ್ಯಾದ ಜಕಾರ್ತ ಹಾಗೂ ಪಾಲೆಂಬಾಂಗ್‌ನಲ್ಲಿ ನಡೆಯುತ್ತಿರುವ 18ನೇ ಏಶ್ಯನ್ ಗೇಮ್ಸ್‌ನಲ್ಲಿ ಪದಕ ಗಳಿಕೆಯಲ್ಲಿ ಭಾರತ ಉತ್ತಮ ಸಾಧನೆ ಮಾಡಿದೆ.

14ನೇ ದಿನವಾದ ಶನಿವಾರ ಬಾಕ್ಸರ್ ಅಮಿತ್ ಪಾಂಘಾಲ್ ಪುರುಷರ ಲೈಟ್ ಫ್ಲೈ 49 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದರು. ಈ ಮೂಲಕ ಈ ವರ್ಷದ ಗೇಮ್ಸ್‌ನಲ್ಲಿ ಭಾರತ ಒಟ್ಟು 66 ಪದಕಗಳನ್ನು ಜಯಿಸಿ 2010ರಲ್ಲಿ ಚೀನಾದ ಗ್ವಾಂಗ್‌ಝೌನಲ್ಲಿ ನಡೆದಿದ್ದ ಏಶ್ಯನ್ ಗೇಮ್ಸ್‌ನಲ್ಲಿನ ಪದಕ ಗಳಿಕೆ ಸಾಧನೆ(ಒಟ್ಟು 65 ಪದಕ)ಯನ್ನು ಉತ್ತಮಪಡಿಸಿಕೊಂಡಿತು.

2010ರ ಏಶ್ಯನ್ ಗೇಮ್ಸ್‌ನಲ್ಲಿ ಭಾರತ 14 ಚಿನ್ನ, 17 ಬೆಳ್ಳಿ ಹಾಗೂ 34 ಕಂಚಿನ ಪದಕಗಳನ್ನು ಜಯಿಸಿತ್ತು. ಈಗ ನಡೆಯುತ್ತಿರುವ ಗೇಮ್ಸ್‌ನಲ್ಲಿ 15 ಚಿನ್ನ,23 ಬೆಳ್ಳಿ ಹಾಗೂ 29 ಕಂಚು ಸಹಿತ ಒಟ್ಟು 67 ಪದಕಗಳನ್ನು ಗೆದ್ದುಕೊಂಡಿದೆ.

ಪುರುಷರ ಬ್ರಿಡ್ಜ್ ಟೀಮ್ ಸ್ಪರ್ಧೆಯಲ್ಲಿ ಪ್ರಣಬ್ ಬರ್ದನ್ ಹಾಗೂ ಶಿಬ್‌ನಾಥ್ ದೇವ್ ಸರ್ಕಾರ್ ಚಿನ್ನದ ಪದಕ ಜಯಿಸಿ ಅಚ್ಚರಿ ಮೂಡಿಸಿದರು. ಭಾರತಕ್ಕೆ 15ನೇ ಚಿನ್ನ ಗೆದ್ದುಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News