ರೈಲು ಢಿಕ್ಕಿಯಾಗಿ ವಿದ್ಯಾರ್ಥಿನಿ ಮೃತ್ಯು

Update: 2018-09-04 10:02 GMT

ಕಣ್ಣೂರ್(ಕೇರಳ), ಸೆ.4: ಇಲ್ಲಿಗೆ ಸಮೀಪದ ಪಯ್ಯೋಲಿಯಲ್ಲಿ ಎರಡನೆ ಗೇಟಿನ ಬಳಿ ರೈಲು ಢಿಕ್ಕಿಯಾಗಿ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿದ್ದಾಳೆ. ಮಣ್ಣಂಕುಂಡಿನ ನಾಸಿರ್‍ರ ಪುತ್ರಿ ಅನ್ನಾ ಫಾತಿಮಾ ಮೃತಪಟ್ಟ ವಿದ್ಯಾರ್ಥಿನಿ.

ರೈಲು ಹಿಂದಿನಿಂದ ಬರುತ್ತಿದ್ದುದನ್ನು ಗಮನಿಸಿದ ಫಾತಿಮಾ  ಎರಡನೆ ಗೇಟಿನ ಬಳಿಗೆ ಓಡುತ್ತಿದ್ದಾಗ ರೈಲು ಢಿಕ್ಕಿ ಹೊಡೆದಿದೆ. ಪರಿಣಾಮ ಆಕೆ ಮೃತಪಟ್ಟಿದ್ದಾಳೆ. ಫಾತಿಮಾ ತೃಕ್ಕೋಟ್ಟೂರ್ ಯುಪಿ ಸ್ಕೂಲಿನ ಏಳನೆ ತರಗತಿಯ ವಿದ್ಯಾರ್ಥಿನಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News