ವಿಮಾನ ವಿನ್ಯಾಸ: ಬೆಂಗಳೂರು ವಿದ್ಯಾರ್ಥಿಗಳಿಗೆ ಮೊದಲ ಬಹುಮಾನ

Update: 2018-09-04 15:00 GMT

ಬೆಂಗಳೂರು, ಸೆ.4: ಏರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾ ವಿನ್ಯಾಸ ವಿಭಾಗ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಅಂತರಿಕ್ಷ ಕಾಲ್ಪನಿಕ ವಿನ್ಯಾಸ ಸ್ಪರ್ಧೆಯಲ್ಲಿ ನಗರದ ಎಂವಿಜೆ ಕಾಲೇಜಿನ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮೊದಲ ಬಹುಮಾನ ಪಡೆದಿದ್ದಾರೆ ಎಂದು ಕಾಲೇಜಿನ ಅಧ್ಯಾಪಕ ಡಾ.ಪಿ.ಗಿರಿಧರ್‌ ರೆಡ್ಡಿ ಹೇಳಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಪರ್ಧೆಯಲ್ಲಿ ಕಾಲೇಜಿನ ಅಭಿಮನ್ಯು ತಂಡವು ರನ್ ವೇ ಜತೆಗೆ ಸಮುದ್ರದಲ್ಲಿ ಟೇಕ್ ಆಫ್ ಮತ್ತು ನಿಲ್ಲುವ ಸಾಮರ್ಥ್ಯವುಳ್ಳ ವಿಮಾನವನ್ನು ವಿನ್ಯಾಸಗೊಳಿಸಿದಕ್ಕಾಗಿ ಮೊದಲ ಬಹುಮಾನ ಪಡೆದಿದ್ದಾರೆ ಎಂದು ತಿಳಿಸಿದರು.

ವಿದ್ಯಾರ್ಥಿಗಳಿಂದ ವಿನ್ಯಾಸಗೊಳಿಸಲ್ಪಟ್ಟ ವಿಮಾನವು ಪ್ಯಾಸೆಂಜರ್ (ಪಿಎಎಕ್ಸ್) ಮಿಷನ್ ಮತ್ತು ಏರ್ ಸೀ ರೆಸ್ಕೂ (ಎಎಸ್‌ಆರ್) ಮಿಷನ್‌ನ ಎಲ್ಲ ನಿರ್ದಿಷ್ಟ ಅವಶ್ಯಕತೆಗಳನ್ನು ಪೂರೈಸಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News