ಅಪಾಯಕಾರಿ ಪಟಾಕಿ ನಿಷೇಧಕ್ಕೆ ಮನವಿ

Update: 2018-09-04 18:06 GMT

ಬೆಂಗಳೂರು, ಸೆ.4: ಅಪಾಯಕಾರಿ ಪಟಾಕಿಗಳು ಮಕ್ಕಳ ಕೈಸೇರಿ, ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಈ ಕಾರಣಕ್ಕೆ ಹ್ಯಾಂಡ್ ಗ್ರನೇಡ್‌ನಂತಹ ಪಟಾಕಿಯನ್ನು ನಿಷೇಧಿಸುವಂತೆ ಸಾರ್ವಜನಿಕರು ಸರಕಾರಕ್ಕೆ ಮನವಿ ಮಾಡಿದ್ದಾರೆ.

ಹಬ್ಬಗಳು ಆರಂಭವಾಗುತ್ತಿರುವ ಬೆನ್ನಲ್ಲೇ, ಕಡಿಮೆ ದರದಲ್ಲಿ ಪಟಾಕಿಗಳು ಸುಲಭವಾಗಿ ಮ್ಕಕಳ ಕೈ ಸೇರುತ್ತಿವೆ. ಹ್ಯಾಂಡ್ ಗ್ರನೇಡ್‌ನಂತಹ ಪಟಾಕಿಯನ್ನು ವಿದ್ಯಾರ್ಥಿಗಳು ಶಾಲಾ ತರಗತಿಗಳಲ್ಲಿ ಸಿಡಿಸುತ್ತಿದ್ದಾರೆ. ಸಲ್ಫರ್ ಸೇರಿದಂತೆ ಅಪಾಯಕಾರಿ ರಾಸಾಯನಿಕ ವಸ್ತುಗಳಿಂದ ತಯಾರಿಸ್ಪಟ್ಟ ಈ ಪಟಾಕಿಗಳನ್ನು ಮಕ್ಕಳ ಕೈಗೆ ಸಿಗದಂತೆ ಜಾಗ್ರತೆ ವಹಿಸಬೇಕಾಗಿದೆ ಎಂದು ಬೆಂಗಳೂರು ನಾಗರಿಕರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News