ಟೆಸ್ಟ್: ಭಾರತ ‘ಎ’ ತಂಡಕ್ಕೆ 98 ರನ್ ಸೋಲು

Update: 2018-09-05 18:38 GMT

ಬೆಂಗಳೂರು, ಸೆ.5: ಆಸ್ಟ್ರೇಲಿಯ ‘ಎ’ ತಂಡದ ಎಡಗೈ ಸ್ಪಿನ್ನರ್ ಜಾನ್ ಹಾಲೆಂಡ್ ದಾಳಿಗೆ ಸಿಲುಕಿದ ಭಾರತ ‘ಎ’ ತಂಡ ಎರಡನೇ ಇನಿಂಗ್ಸ್‌ನಲ್ಲಿ 163 ರನ್‌ಗೆ ಆಲೌಟಾಗಿ 98 ರನ್‌ಗಳ ಅಂತರದಿಂದ ಸೋತಿದೆ.

  ಬುಧವಾರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮೊದಲ ಅನಧಿಕೃತ ಟೆಸ್ಟ್ ಪಂದ್ಯದ 2ನೇ ಇನಿಂಗ್ಸ್‌ನಲ್ಲಿ 81 ರನ್‌ಗೆ 6 ವಿಕೆಟ್‌ಗಳನ್ನು ಪಡೆದ ಹಾಲೆಂಡ್ ಭಾರತವನ್ನು ಕಾಡಿದರು. ಹಾಲೆಂಡ್ ಪಂದ್ಯದಲ್ಲಿ ಒಟ್ಟು 9 ವಿಕೆಟ್‌ಗಳನ್ನು ಪಡೆದರು.

ಆಸ್ಟ್ರೇಲಿಯ ಮೊದಲ ಇನಿಂಗ್ಸ್‌ನಲ್ಲಿ ಮುಹಮ್ಮದ್ ಸಿರಾಜ್(59ಕ್ಕೆ8)ದಾಳಿಗೆ ಸಿಲುಕಿ 243 ರನ್‌ಗೆ ಆಲೌಟಾಯಿತು. ಭಾರತವನ್ನು ಮೊದಲ ಇನಿಂಗ್ಸ್‌ನಲ್ಲಿ 274 ರನ್‌ಗೆ ನಿಯಂತ್ರಿಸಿದ ಆಸ್ಟ್ರೇಲಿಯ ತಿರುಗೇಟು ನೀಡಿತು. ಭಾರತಕ್ಕೆ 31 ರನ್ ಮುನ್ನಡೆ ಬಿಟ್ಟುಕೊಟ್ಟ ಆಸೀಸ್ ತನ್ನ 2ನೇ ಇನಿಂಗ್ಸ್ ನಲ್ಲಿ 292 ರನ್ ಗಳಿಸಿ ಭಾರತದ ಗೆಲುವಿಗೆ 262 ರನ್ ಗುರಿ ನೀಡಿತು. 4ನೇ ದಿನವಾದ ಬುಧವಾರ 63ಕ್ಕೆ 2 ವಿಕೆಟ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಭಾರತ 163 ರನ್‌ಗೆ ಆಲೌಟಾಯಿತು. ಭಾರತದ ಪರ ಮಯಾಂಕ್ ಅಗರ್ವಾಲ್(80) ಏಕಾಂಗಿ ಹೋರಾಟ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News