ಮಾದಕ ಮಾತ್ರೆಗಳ ಮಾರಾಟಕ್ಕೆ ಯತ್ನಿಸಿದ ವ್ಯಕ್ತಿಯ ಬಂಧನ: 3.20 ಲಕ್ಷ ರೂ.ಮೌಲ್ಯದ ಮಾತ್ರೆ ವಶ

Update: 2018-09-06 17:31 GMT

ಬೆಂಗಳೂರು, ಸೆ.6: ಮಾದಕ ಮಾತ್ರೆಗಳನ್ನು ಮಾರಾಟ ಮಾಡಲು ಹೊಂಚು ಹಾಕುತ್ತಿದ್ದ ಆರೋಪಿಯನ್ನು ಬಂಧಿಸಿರುವ ಸಿಸಿಬಿ ಪೊಲೀಸರು 3.20ಲಕ್ಷ ರೂ. ಮೌಲ್ಯದ ಮಾದಕ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ.

ಉತ್ತರ ಪ್ರದೇಶ ಮೂಲದ ಮುಹಮ್ಮದ್ ಅಬ್ದುಲ್ ರೆಹಮಾನ್ ಬಂಧಿತ ಆರೋಪಿಯಾಗಿದ್ದು, ಈತ ಥೈಲ್ಯಾಂಡ್, ಮ್ಯಾನ್ಮಾರ್, ಬಾಂಗ್ಲಾದೇಶ ಮೂಲದ ಮೆಥಾಂಫೆಟಮೈನ್ ಹೆಸರಿನ ಮಾದಕ ಮಾತ್ರೆಗಳನ್ನು ಮಾರಾಟ ಮಾಡಲು ಬರುತ್ತಿದ್ದಾನೆ ಎಂಬ ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ.

ಆರೋಪಿಯಿಂದ 335 ಮಾದಕ ಮಾತ್ರೆಗಳು, 20 ಜಿಪ್‌ಲಾಕ್ ಕವರುಗಳು, ಒಂದು ಮೊಬೈಲ್ ಫೋನ್ ಮತ್ತು 500 ರೂ.ನಗದು ಹಣವನ್ನು ವಶಕ್ಕೆ ಪಡೆಯಲಾಗಿರುತ್ತದೆ. ವಶಕ್ಕೆ ಪಡೆಯಲಾಗಿದೆ. ಆರೋಪಿ ತನ್ನ ಸಹಚರರೊಂದಿಗೆ ಸೇರಿಕೊಂಡು, ಮಾದಕ ಮಾತ್ರೆಗಳನ್ನು ಹೊರದೇಶದಿಂದ ತನ್ನ ವ್ಯವಸ್ಥಿತ ಜಾಲದ ಮೂಲಕ ತರಿಸಿಕೊಂಡು, ತನ್ನದೆ ಗಿರಾಕಿಗಳಿಗೆ ಪ್ರತಿ ಮಾತ್ರೆಗೆ 600-900 ರೂ.ಗೆ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿರುವುದಾಗಿ ಸಿಸಿಬಿ ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News