ಸಂಶೋಧನಾ ಪ್ರಶಸ್ತಿಗೆ ಆಯ್ಕೆ

Update: 2018-09-06 17:40 GMT

ಬೆಂಗಳೂರು, ಸೆ.6: ಎಸಿಸಿಎಸ್ ಹಾಗೂ ಸಿಡಿಎಸಿ ನೀಡುವ ಫೌಂಡೇಷನ್ ಅವಾರ್ಡ್‌ಗೆ ಬೆಂಗಳೂರಿನ ಐಐಎಸ್‌ಸಿ ಪ್ರೊ.ಪಿ.ವಿಜಯ್ ಕುಮಾರ್ ಹಾಗೂ ಪ್ರೊ.ವಿ.ಕಾಮಕೋಟಿ ಆಯ್ಕೆಯಾಗಿದ್ದಾರೆ.

ಗುರುವಾರ ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರಿನ ಇಂಟರ್ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಇನ್ಫರ್‌ಮೇಷನ್ ಟೆಕ್ನಾಲಜಿ ಸಂಸ್ಥೆಯ ನಿರ್ದೇಶಕ ಪ್ರೊ.ಎಸ್.ಶದಗೋಪನ್ ಪ್ರಸಕ್ತ ಸಾಲಿನ ಪ್ರಶಸ್ತಿಗಳನ್ನು ಪ್ರಕಟಿಸಿ. ಸೆ.21ರಂದು ಐಐಟಿಬಿಯಲ್ಲಿ ನಡೆಯಲಿರುವ ವಾರ್ಷಿಕ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.

ವಿಎಲ್ಎಸ್‌ಐ ಡಿಸೈನ್ ಕ್ಷೇತ್ರದಲ್ಲಿನ ಮಹತ್ವದ ಕೊಡುಗೆ ಹಾಗೂ ಕಂಪ್ಯೂಟರ್ ಸಂರಚನಾ ವಲಯದಲ್ಲಿ ಭಾರತದ ಪ್ರಥಮ ಆರ್ ಐಎಸ್ಸಿ-ವಿ ಪ್ರೊಸೆಸಸ್ ಅಭಿವದ್ಧಿ ಪಡಿಸಿದ ಗಣನೀಯ ಕೊಡುಗೆಗೆ ಪ್ರೊ.ಕಾಮಕೋಟಿಯನ್ನು ಹಾಗೂ ಸೆಲ್ಯುಲ್ಲಾರ್ ಪ್ರಮಾಣಿತಗಳಲ್ಲಿ ಅಳವಡಿಸಲಾಗಿರುವ ವೈರ್ ಲೆಸ್ ಸಂವಹನ ವಿನ್ಯಾಸದಲ್ಲಿ ದೋಷ ಸರಿಪಡಿಸುವ ಕೋಡ್‌ಗಳ ಸಂರಚನೆಯಲ್ಲಿ ಮೂಲಾಧಾರ ಸ್ವರೂಪಿ ಸಂಶೋಧನೆಗಾಗಿ ಪ್ರೊ.ಪಿ.ವಿಜಯ ಕುಮಾರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News