ಬ್ಲಾಕ್ ಮೇಲ್ ದೂರು ಸತ್ಯಕ್ಕೆ ದೂರ: ನಟ ಧರ್ಮ

Update: 2018-09-06 17:48 GMT

ಬೆಂಗಳೂರು, ಸೆ.6: ಬೇಗೂರು ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು ದಾಖಲಿಸಿರುವ ಬ್ಲಾಕ್ ಮೇಲ್ ದೂರು ಸತ್ಯಕ್ಕೆ ದೂರವಾದ್ದು ಎಂದು ಚಿತ್ರ ನಟ ಧರ್ಮ ಹೇಳಿದರು.

ಗುರುವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನನ್ನ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿದೆ. ನ್ಯಾಯಾಲಯದಿಂದ ನಾನು ಜಾಮೀನು ಪಡೆದಿಕೊಂಡಿದ್ದೇನೆ. ನನ್ನ ವಿರುದ್ಧ ಅಪಪ್ರಚಾರಗಳನ್ನು ಮಾಡಲಾಗುತ್ತಿದ್ದು, ಮಹಿಳೆಯರಿಗೆ ಮೋಸ ಮಾಡಿ ವಿವಾಹವಾಗುವಂತೆ ನಂಬಿಸಿ ಕೈ ಕೊಟ್ಟಿರುವುದಾಗಿ ಮಾಧ್ಯಮಗಳಲ್ಲಿ ಸುಳ್ಳು ಪ್ರಸಾರ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News