ಮೋದಿ ಸರ್ಕಾರ ದೇಶದ ಅತಿದೊಡ್ಡ ಅನುತ್ಪಾದಕ ಆಸ್ತಿ: ಕಪಿಲ್ ಸಿಬಾಲ್ ವಾಗ್ದಾಳಿ

Update: 2018-09-07 03:44 GMT

ಹೊಸದಿಲ್ಲಿ, ಸೆ.7: ಮೋದಿ ಸರ್ಕಾರ ದೇಶದ ಅತಿದೊಡ್ಡ ಅನುತ್ಪಾದಕ ಆಸ್ತಿ (ಎನ್‌ಪಿಎ) ಎಂದು ಹಿರಿಯ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಾಲ್ ವಾಗ್ದಾಳಿ ನಡೆಸಿದ್ದಾರೆ.

ಸಮ್ಮಿಶ್ರ ಸರ್ಕಾರಗಳು ಸದಾ, ಬಹುಮತ ಹೊಂದಿದ ಸರ್ಕಾರಗಳಿಗಿಂತ ಉತ್ತಮ ಆಡಳಿತ ನೀಡಿವೆ ಎಂದು ಶುಕ್ರವಾರ ಬಿಡುಗಡೆಯಾಗುವ ತಮ್ಮ "ಶೇಡ್ಸ್ ಆಫ್ ಟ್ರುಥ್- ಎ ಜರ್ನಿ ಡೀರೈಲ್ಡ್" ಎಂಬ ಕೃತಿಯಲ್ಲಿ ಪ್ರತಿಪಾದಿಸಿದ್ದಾರೆ. ನಾಲ್ಕೂವರೆ ವರ್ಷಗಳ ಮೋದಿ ಸರ್ಕಾರದ ವೈಫಲ್ಯಗಳನ್ನು ಅವರು ಪಟ್ಟಿ ಮಾಡಿದ್ದಾರೆ. "ಔರಂಗಜೇಬ್ ನಕ್ಷ್‌ಬಂದಿ" ಗೆ ನೀಡಿದ ಸಂದರ್ಶನದಲ್ಲಿ ಹಲವು ರಾಜಕೀಯ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

ನಾಲ್ಕೂವರೆ ವರ್ಷಗಳ ಮೋದಿ ಸರ್ಕಾರದ ನೀತಿಗಳನ್ನು ಮತ್ತು ಅವರ ಆಶ್ವಾಸನೆಗಳನ್ನು, ಸರ್ಕಾರದ ಸಾಧನೆಗಳನ್ನು ಅಂಕಿಅಂಶ ಸಹಿತ ವಿಶ್ಲೇಷಿಸುವ ಉದ್ದೇಶದಿಂದ ಈ ಕೃತಿ ಹೊರತರಲಾಗಿದೆ ಎಂದು ಅವರು ಹೇಳಿದ್ದಾರೆ. ಮೋದಿ ನೀಡಿದ ಆಶ್ವಾಸನೆ ಹಾಗೂ ಸಾಧನೆ ನಡುವೆ ದೊಡ್ಡ ಅಂತರವಿದೆ ಎನ್ನುವುದನ್ನು ಮನವರಿಕೆ ಮಾಡಿಕೊಡುವುದು ಇದರ ಉದ್ದೇಶ. ಮೋದಿ ಕಟ್ಟಿದ ಕನಸು ಹಾಗೂ ಛಿದ್ರಗೊಳಿಸಿದ ಕನಸುಗಳ ವಿವರವೂ ಇಲ್ಲಿದೆ ಎಂದು ವಿವರಿಸಿದ್ದಾರೆ.

ಇಷ್ಟಾಗಿಯೂ ಮೋದಿ ಅಧಿಕಾರಕ್ಕೆ ಬಂದ ಬಳಿಕ ಎಲ್ಲ ಬಹುತೇಕ ಚುನಾವಣೆಗಳನ್ನು ಗೆದ್ದಿದ್ದಾರಲ್ಲ ಎಂಬ ಪ್ರಶ್ನೆಗೆ, "ಕನಸುಗಳನ್ನು ಮಾರಾಟ ಮಾಡುವ ಮೂಲಕ ಚುನಾವಣೆ ಗೆಲ್ಲಬಹುದು. 2014ರ ಚುನಾವಣೆ ಬಳಿಕ ಜನ ಮೋದಿ ಮೇಲೆ ವಿಶ್ವಾಸ ಇರಿಸಿದ್ದರು. ಅದರ ಆಧಾರದಲ್ಲಿ ಮೋದಿ ಗೆಲ್ಲುತ್ತಿದ್ದರು. ಆದರೆ 2016ರ ನವೆಂಬರ್ 8ರಿಂದ ಅವರ ಪತನ ಆರಂಭವಾಗಿದೆ" ಎಂದು ಹಿರಿಯ ಮುಖಂಡ ಪ್ರತಿಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News