ಐಎಸ್‌ಎಸ್‌ಎಫ್ ವರ್ಲ್ಡ್ ಚಾಂಪಿಯನ್‌ಶಿಪ್ ;ಹೃದಯ್ ಹಝಾರಿಕಾಗೆ ಚಿನ್ನ

Update: 2018-09-07 09:14 GMT

ಚಾಂಗ್ವಾನ್, ಸೆ.7: ಭಾರತದ 16ರ ಹರೆಯದ ಶೂಟರ್ ಹೃದಯ್ ಹಝಾರಿಕಾ ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಶುಕ್ರವಾರ ಚಿನ್ನ ಜಯಿಸಿದ್ದಾರೆ.

    ಪುರುಷರ  ಜೂನಿಯರ್ ವಿಭಾಗದ  10 ಮೀಟರ್ ಏರ್ ರೈಫಲ್ ಇವೆಂಟ್‌ನಲ್ಲಿ ಹಝಾರಿಕಾ ಮತ್ತು ಇರಾನ್‌ನ ಆಮಿರ್ ನಿಯೋಕೌನಮ್ ಅವರು 250.1 ಪಾಯಿಂಟ್ಸ್‌ಗಳನ್ನು ಕಲೆ ಹಾಕಿ ಸಮಬಲ ಸಾಧಿಸಿದರು. ಆದರೆ ಪ್ರಥಮ ಗುರಿಯಲ್ಲಿ ಹಝಾರಿಕಾ ಅವರು ಆಮಿರ್‌ಗಿಂತ 0.1 ಪಾಯಿಂಟ್ ಮುನ್ನಡೆ ಸಾಧಿಸಿದ್ದರು. ಈ ಕಾರಣದಿಂದಾಗಿ ಹಝಾರಿಕಾಗೆ ಚಿನ್ನ ಒಲಿಯಿತು.

 ಫೈನಲ್‌ನಲ್ಲಿ 250.1 ಪಾಯಿಂಟ್ಸ್‌ಗಳನ್ನು ಕಲೆ ಹಾಕಿದ್ದ ಹಝರಿಕಾ ಮತ್ತು ಆಮಿರ್ 0.1 ಅಂತರದಲ್ಲಿ ವಿಶ್ವದಾಖಲಿಸುವ ಅವಕಾಶವನ್ನು ಕೈ ಚೆಲ್ಲಿದರು.

 ಆರಂಭದಲ್ಲಿ ಹಝಾರಿಕಾ 627.3 ಸ್ಕೋರ್ ಸಂಪಾದಿಸಿ 4ನೇ ಸ್ಥಾನದೊಂದಿಗೆ ಫೈನಲ್‌ಗೆ ಪ್ರವೇಶ ಪಡೆದಿದ್ದರು. ಇವರನ್ನು ಹೊರತುಪಡಿಸಿದರೆ ಬೇರೆ ಯಾರಿಗೂ ಫೈನಲ್ ತಲುಪಲು ಸಾಧ್ಯವಾಗಲಿಲ್ಲ.ರಶ್ಯದ ಗ್ರಿಗೋರಿ ಶಮಾಕೋವ್ 228.6 ಪಾಯಿಂಟ್ಸ್ ಗಳಿಸಿ ಕಂಚು ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News