ಕೆಪಿಎಸ್ಸಿ: ಅರ್ಹ ಅಭ್ಯರ್ಥಿಗಳ ಪಟ್ಟಿ ಪ್ರಕಟ

Update: 2018-09-07 15:11 GMT

ಬೆಂಗಳೂರು, ಸೆ. 7: ಕೆಪಿಎಸ್ಸಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿನ ವಸತಿ ಶಾಲೆಗಳಲ್ಲಿನ ಗಣಿತ ಶಿಕ್ಷಕರು 100+65 (ಹೈ.ಕ) ಹುದ್ದೆಗೆ ಸಂಬಂಧಿಸಿದಂತೆ, ಮೂಲ ದಾಖಲಾತಿಗಳ ಪರಿಶೀಲನೆಗೆ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಅಭ್ಯರ್ಥಿಗಳ ಮಾಹಿತಿಗಾಗಿ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಮೂಲ ದಾಖಲೆಗಳ ಪರಿಶೀಲನಾ ಕಾರ್ಯವನ್ನು ಸೆ.19, 20 ಹಾಗೂ 22ರಂದು ನಡೆಸಲು ತೀರ್ಮಾನಿಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಗೆ ಸೂಚನಾ ಪತ್ರಗಳನ್ನು ಈಗಾಗಲೇ ಅಂಚೆ ಮೂಲಕ ರವಾನಿಸಲಾಗಿರುತ್ತದೆ.

ಸೂಚನಾ ಪತ್ರವು ಸರಿಯಾದ ಸಮಯದಲ್ಲಿ ತಲುಪದಿದ್ದಲ್ಲಿ, ಅರ್ಹ ಅಭ್ಯರ್ಥಿಗಳು ಪಟ್ಟಿಯನ್ನು ವೆಬ್‌ಸೈಟ್‌ನಿಂದ ಪ್ರಿಂಟ್‌ಔಟ್‌ನ್ನು ಪಡೆದು ನಿಗದಿತ ದಿನಾಂಕದಂದು ಹಾಜರಾಗಬಹುದೆಂದು ಕರ್ನಾಟಕ ಲೋಕಸೇವಾ ಆಯೋಗದ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News