ರಾಷ್ಟ್ರೀಯ ಪುರುಷ ಆಯೋಗ ರಚನೆಗೆ ಆಗ್ರಹ

Update: 2018-09-07 16:59 GMT

ಬೆಂಗಳೂರು, ಸೆ.7: ಕಾನೂನುಗಳನ್ನು ದುರ್ಬಳಕೆ ಮಾಡುವ ಮಹಿಳೆಯರ ವಿರುದ್ಧ ಕ್ರಮ ತೆಗೆದುಕೊಳ್ಳಲು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಅನುಗುಣವಾಗಿ ರಾಷ್ಟ್ರೀಯ ಪುರುಷರ ಆಯೋಗವನ್ನು ರಚಿಸಬೇಕು ಎಂದು ಸಿಆರ್‌ಐಎಸ್‌ಪಿ ಅಧ್ಯಕ್ಷ ಕುಮಾರ್ ಜಾಗಿರ್ದಾರ್ ಆಗ್ರಹಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳಾ ಕೇಂದ್ರಿತ ಕಾನೂನುಗಳನ್ನು ದುರುಪಯೋಗ ಪಡಿಸಿಕೊಂಡು, ಬೆದರಿಕೆಯೊಡ್ಡುವ ಕ್ರೂರ ಹೆಂಡತಿಯರ ವಿರುದ್ಧ ದೂರುಗಳನ್ನು ದಾಖಲಿಸಲು ಪೊಲೀಸರಿಗೆ ಅಧಿಕಾರ ನೀಡಬೇಕು ಎಂದು ಒತ್ತಾಯಿಸಿದರು.

498 ಎ ವರದಕ್ಷಿಣೆ ಆಕ್ಟ್‌ನ ದುರ್ಬಳಕೆಯಿಂದ 27ಲಕ್ಷ ಪುರುಷರು 1998ರಿಂದ 2015ರವರೆಗೂ ಸುಳ್ಳು ದೂರುಗಳಿಗೆ ಜೈಲಿಗೆ ಹೋಗಿದ್ದಾರೆ. ಹಾಗೂ ಕಿರುಕುಳಕ್ಕೊಳಗಾದ ಪುರುಷರಿಂದ ಕನಿಷ್ಠವೆಂದರೂ ವಾರಕ್ಕೆ 30 ಫೋನ್ ಕರೆಗಳು ಸಿಆರ್‌ಐಎಸ್‌ಪಿ ಎನ್‌ಜಿಒಗೆ ಬರುತ್ತಿವೆ ಎಂದು ಮಾಹಿತಿ ನೀಡಿದರು. ಸೆ.10ರಂದು ಆತ್ಮಹತ್ಯೆಗಳನ್ನು ತಡೆಗಟ್ಟಲು ವಿಶ್ವ ಸುಸೈಡ್ ತಡೆಗಟ್ಟುವಿಕೆ ದಿನ ಆಚರಿಸುವ ಮೂಲಕ ಜಾಗೃತಿಯನ್ನು ಮೂಡಿಸಲಿದ್ದೇವೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News