ಹಿಮಾ, ಸ್ವಪ್ನಾಗೆ ಅದ್ದೂರಿ ಸ್ವಾಗತ

Update: 2018-09-07 18:35 GMT

ಗುವಾಹಟಿ/ಕೋಲ್ಕತಾ, ಸೆ.7: ಏಶ್ಯನ್ ಗೇಮ್ಸ್‌ನಲ್ಲಿಅವಳಿ ಪದಕ ವಿಜೇತೆ ಹಿಮಾ ದಾಸ್ ಹಾಗೂ ಹೆಪ್ಟಾಥ್ಲೀಟ್‌ನಲ್ಲಿ ಸ್ವರ್ಣ ಜಯಿಸಿರುವ ಸ್ವಪ್ನಾ ಬರ್ಮನ್ ಇಂಡೋನೇಶ್ಯಾದಿಂದ ಇಂದು ಸ್ವದೇಶಕ್ಕೆ ವಾಪಸಾಗಿದ್ದು ಇಬ್ಬರಿಗೂ ಅದ್ದೂರಿ ಸ್ವಾಗತ ನೀಡಲಾಗಿದೆ.

ಏಶ್ಯನ್ ಗೇಮ್ಸ್‌ನಲ್ಲಿ ಚಿನ್ನ ಹಾಗೂ ಬೆಳ್ಳಿ ಜಯಿಸಿರುವ ಹಿಮಾ ದಾಸ್‌ರನ್ನು ಎಲ್‌ಪಿಜಿಬಿ ಏರ್‌ಪೋರ್ಟ್‌ನಲ್ಲಿ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಹಾಗೂ ಅವರ ಸಂಪುಟ ಸಚಿವರು ಅಸ್ಸಾಂನ ಸಾಂಪ್ರದಾಯಿಕ ಶಾಲು ಹೊದಿಸಿ ಸ್ವಾಗತಿಸಿದರು. ಹಿಮಾ ಅವರ ಹೆತ್ತವರಾದ ರಂಜಿತ್ ಹಾಗೂ ಜೊನಾಲಿ ದಾಸ್ ಏರ್‌ಪೋರ್ಟ್‌ನಲ್ಲಿ ಉಪಸ್ಥಿತರಿದ್ದರು.

ಇದೇ ವೇಳೆ ಕೋಲ್ಕತಾದ ಎನ್‌ಎಸ್‌ಸಿಬಿಐ ಏರ್‌ಪೋರ್ಟ್‌ಗೆ ಬಂದಿಳಿದ ಅಥ್ಲೀಟ್ ಸ್ವಪ್ನಾ ಬರ್ಮನ್‌ಗೆ ಶಾಲು ಹಾಗೂ ಹೂಗುಚ್ಛ ನೀಡಿ ಸ್ವಾಗತ ಕೋರಲಾಯಿತು. ಸ್ವಪ್ನಾ 7 ಸ್ಪರ್ಧೆಗಳಿರುವ ಹೆಪ್ಟಾಥ್ಲಾನ್‌ನಲ್ಲಿ ಚಿನ್ನದ ಪದಕ ಜಯಿಸಿ ಇತಿಹಾಸ ನಿರ್ಮಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News