ಗಗನಕ್ಕೇರುತ್ತಿದೆ ಇಂಧನ ಬೆಲೆ: ದಿಲ್ಲಿಯಲ್ಲಿ ಪೆಟ್ರೋಲ್ ಲೀ.ಗೆ 80, ಮುಂಬೈನಲ್ಲಿ 87 ರೂ.

Update: 2018-09-08 07:04 GMT

ಹೊಸದಿಲ್ಲಿ, ಸೆ.8: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಸತತ ಮೂರನೇ ದಿನವಾದ ಶನಿವಾರ ಹೊಸದಿಲ್ಲಿ ಹಾಗೂ ಮುಂಬೈ ನಗರಗಳಲ್ಲಿ ಏರಿಕೆಯಾಗಿದೆ.

ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 80.38 ರೂ.(ಪ್ರತಿ ಲೀ.ಗೆ 0.39 ಪೈಸೆ ಹೆಚ್ಚಳ) ಹಾಗೂ ವಾಣಿಜ್ಯ ನಗರಿ ಮುಂಬೈನಲ್ಲಿ ಪ್ರತಿ ಲೀಟರ್‌ಗೆ 87.77 ರೂ.(ಪ್ರತಿ ಲೀ.ಗೆ 0.38 ಪೈಸೆ)ಹೆಚ್ಚಳವಾಗಿದೆ.

  ಮತ್ತೊಂದೆಡೆ, ಡೀಸೆಲ್ ಬೆಲೆಯೂ ಗಗನಕ್ಕೇರುತ್ತಿದೆ. ಹೊಸದಿಲ್ಲಿಯಲ್ಲಿ ಪ್ರತಿ ಲೀಟರ್‌ಗೆ 0.44 ಪೈಸೆ ಹೆಚ್ಚಳವಾಗಿದ್ದು. ಪ್ರತಿ ಲೀಟರ್‌ಗೆ 72.51 ರೂ.ನಲ್ಲಿ ಮಾರಾಟ ಮಾಡಲಾಗುತ್ತಿದೆ. ಮುಂಬೈನಲ್ಲಿ 0.47 ಪೈಸೆ ಹೆಚ್ಚಳವಾಗಿದ್ದು ಪ್ರತಿ ಲೀಟರ್‌ಗೆ 76.98 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ವಿರೋಧ ಪಕ್ಷಗಳು ಇಂಧನ ಬೆಲೆ ದಿನದಿಂದ ದಿನಕ್ಕೆ ಏರುತ್ತಿರುವುದನ್ನು ಖಂಡಿಸಿ ಸೆ.10 ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ. ಕೇಂದ್ರ ಸರಕಾರ ಅಬಕಾರಿ ಶುಂಕವನ್ನು ಕಡಿತಗೊಳಿಸಬೇಕೆಂದು ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News