ಕೆಸಿಎಫ್ ಒಮನ್ ಸಮಿತಿಯ ವಾರ್ಷಿಕ ಮಹಾಸಭೆ

Update: 2018-09-08 08:18 GMT

ಒಮನ್, ಸೆ.8: ಕರ್ನಾಟಕ ಕಲ್ಚರಲ್ ಫೌಂಡೇಶನ್(ಕೆಸಿಎಫ್) ಒಮನ್ ಇದರ ರಾಷ್ಟ್ರೀಯ ಸಮಿತಿಯ ವಾರ್ಷಿಕ ಕೌನ್ಸಿಲ್ ಸಭೆಯು ಶುಕ್ರವಾರ ಬರ್ಕದ ಅಲ್ ಫಲಾಹ್ ಮದ್ರಸದಲ್ಲಿ ಜರುಗಿತು.
 ಕೆಸಿಎಫ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಸೈಯದ್ ಆಬಿದ್ ಅಲ್ ಹೈದ್ರೋಸಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಉರ್ದು ವಿಂಗ್ ಅಧ್ಯಕ್ಷ ಶಾಕಿರ್ ಮೌಲಾನ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಐಸಿಎಫ್ ಮುಖಂಡರಾದ ಇಸ್ಮಾಯೀಲ್ ಸಖಾಫಿ, ಜಮಾಲುದ್ದೀನ್ ಲತೀಫಿ ಬರ್ಕ ಸಾಂದರ್ಭಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಖಾಸಿಂ ಹಾಜಿ ನಿಝ್ವ ಲೆಕ್ಕ ಪತ್ರವನ್ನು ಮಂಡಿಸಿ ಕೋಶಾಧಿಕಾರಿ ಖಾಸಿಂ ಹಾಜಿ ನಿಝ್ವ ಲೆಕ್ಕ ಪತ್ರವನ್ನು ಮಂಡಿಸಿದರು.

ಅಕ್ಬರ್ ಉಪ್ಪಳ್ಳಿ, ಝುಬೈರ್ ಸಅದಿ ಪಟ್ರಕೋಡಿ, ಅಯ್ಯೂಬ್ ಕೋಡಿ, ಶಂಸುದ್ದೀನ್ ಪಾಲ್ತಡ್ಕ, ಖಲಂದರ್ ಬಾವ, ಉಮ್ರಾ ನಿಝಾರ್ ಝುಹ್ರಿ, ಹಾಗೂ ಆರಿಫ್ ಕೋಡಿ ವಿಭಾಗವಾರು ವರದಿ ಮಂಡಿಸಿದರು.

ಪ್ರಧಾನ ಕಾರ್ಯದರ್ಶಿ ಹನೀಫ್ ಸಅದಿ ಸ್ವಾಗತಿಸಿ, ವಾರ್ಷಿಕ ವರದಿ ವಾಚಿಸಿದರು.

ಬಳಿಕ ಕೆಸಿಎಫ್ ಐಎನ್‌ಸಿಯ ಸಂಘಟನಾ ಕಾರ್ಯದರ್ಶಿ ಇಕ್ಬಾಲ್ ಬೊಳ್ಮಾರ್ ಬರ್ಕ ನೇತೃತ್ವದಲ್ಲಿ ಕೆಸಿಎಫ್ ಒಮನ್ ರಾಷ್ಟ್ರೀಯ ಸಮಿತಿಯ 2018-19ನೇ ಸಾಲಿಗೆ ಕಾರ್ಯಕಾರಿ ಸಮಿತಿಯನ್ನು ಪುನರ್ ರಚಿಸಲಾಯಿತು.

ಸಹ ಕಾರ್ಯದರ್ಶಿಯಾಗಿ ಸಾದಿಕ್ ಸುಳ್ಯ, ಸಂಘಟನಾ ಕಾರ್ಯದರ್ಶಿಯಾಗಿ ಸಿದ್ದೀಕ್ ಮಾಂಬ್ಳಿ ಸುಳ್ಯ, ಮೀಡಿಯಾ ಕಾರ್ಯದರ್ಶಿಯಾಗಿ ಅಶ್ರಫ್ ಭಾರತ್ ಸುಳ್ಯ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಲತೀಫ್ ತೋಡಾರ್ ಆಯ್ಕೆಯಾದರು.

ಇಹ್ಸಾನ್ ವಿಭಾಗದ ಅಧ್ಯಕ್ಷ ಶಮೀರ್ ಉಸ್ತಾದ್ ಹೂಡೆ, ಉಮ್ರಾ ವಿಭಾಗದ ಅಧ್ಯಕ್ಷ ಗಫ್ಫಾರ್ ನಾವುಂದ ಹಾಗೂ ಕೆಸಿಎಫ್ ಒಮನ್ ರಾಷ್ಟ್ರೀಯ ಮತ್ತು ಝೋನ್ ಕೌನ್ಸಿಲ್ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News