ಭ್ರಷ್ಟ ಅಧಿಕಾರಿಗಳ ಅಮಾನತ್ತಿಗೆ ದಸಂಸ ಆಗ್ರಹ

Update: 2018-09-08 13:40 GMT

ಬೆಂಗಳೂರು, ಸೆ.8: ಯಲಹಂಕದ ಕಂದಾಯ ಅಧಿಕಾರಿ ಬಿ.ಆರ್. ಮಂಜುನಾಥ್, ಬಿ.ನಂದನ್, ಆರ್.ಜೆ.ರಂಗೇಗೌಡ ಸೇರಿದಂತೆ ಮೂರು ಜನ ಭ್ರಷ್ಟ ಅಧಿಕಾರಿಗಳನ್ನು ಕೂಡಲೇ ಅಮಾನತ್ತು ಮಾಡಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಒತ್ತಾಯಿಸಿದೆ.

ಶನಿವಾರ ನಗರದ ಪ್ರೆಸ್‌ಕ್ಲಬ್‌ನ ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಆರ್.ಅಶ್ವಥ್ ನಾರಾಯಣ ಮಾತನಾಡಿ, ಹುತ್ತನಹಳ್ಳಿ ಗ್ರಾಮದ ಸರ್ವೆ ನಂ.23, 72, 73ರ ಸರಕಾರಿ ಗೋಮಾಳದಲ್ಲಿ ಅಕ್ರಮವಾಗಿ ಬಡಾವಣೆ ನಿರ್ಮಿಸಿದ್ದು, ಅಧಿಕಾರಿಗಳು ಭೂಗಳ್ಳರ ಜತೆ ಶಾಮೀಲಾಗಿ ಕೋಟ್ಯಂತರ ರೂಪಾಯಿ ದರೋಡೆ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರು. ಕೂಡಲೇ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಭೂಮಿಯನ್ನು ಸರಕಾರ ತನ್ನ ವಶಕ್ಕೆ ಪಡೆದುಕೊಂಡು, ಭೂಮಿಯಿಲ್ಲದ ಬಡವರ ವ್ಯವಸಾಯಕ್ಕೆ ಭೂಮಿ ಮತ್ತು ವಾಸಕ್ಕಾಗಿ ವಸತಿ ಕಲ್ಪಿಸಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಯೋಜಕ ನಾಗೇಂದ್ರ, ಲೋಕೇಶ್, ಸಿ.ಆಂಜನಪ್ಪ, ಸದಸ್ಯೆ ಲಕ್ಷ್ಮೀ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News