ಬ್ರೆಝಿಲ್ ನಾಯಕನಾಗಿ ನೇಮರ್ ಆಯ್ಕೆ

Update: 2018-09-08 18:36 GMT

ರಿಯೋ ಡಿಜನೈರೊ, ಸೆ.8: ಸ್ಟಾರ್ ಫಾರ್ವರ್ಡ್ ಆಟಗಾರ ನೇಮರ್ ಜೂನಿಯರ್ ಅವರನ್ನು ಬ್ರೆಝಿಲ್ ಫುಟ್ಬಾಲ್ ತಂಡದ ಪೂರ್ಣಕಾಲಿಕ ಕೋಚ್ ಆಗಿ ಬ್ರೆಝಿಲ್ ಫುಟ್ಬಾಲ್ ತಂಡದ ಕೋಚ್ ಟೈಟ್ ಅವರು ನೇಮಕ ಮಾಡಿದ್ದಾರೆ.

ನ್ಯೂ ಜೆರ್ಸಿಯಲ್ಲಿ ಅಮೆರಿಕ ವಿರುದ್ಧ ಶುಕ್ರವಾರ ರಾತ್ರಿ ನಡೆಯಲಿರುವ ಸೌಹಾರ್ದ ಪಂದ್ಯಕ್ಕಿಂತ ಮೊದಲು ನೇಮರ್‌ರನ್ನು ನಾಯಕರನ್ನಾಗಿ ನೇಮಿಸಲಾಗಿದೆ.

ನೇಮರ್ ಈ ಹಿಂದೆ 2016ರಲ್ಲಿ ನಡೆದಿದ್ದ ರಿಯೋ ಒಲಿಂಪಿಕ್ಸ್ ವೇಳೆ ಬ್ರೆಝಿಲ್ ತಂಡದ ನಾಯಕನಾಗಿದ್ದರು. ಬ್ರೆಝಿಲ್ ಚಿನ್ನದ ಪದಕ ಜಯಿಸಿದ ಬಳಿಕ ನೇಮರ್‌ರನ್ನು ನಾಯಕನ ಸ್ಥಾನದಿಂದ ಮುಕ್ತಗೊಳಿಸಲಾಗಿತ್ತು.

ಕಳೆದ 2 ವರ್ಷಗಳಲ್ಲಿ 12ಕ್ಕೂ ಅಧಿಕ ಆಟಗಾರರು ಬ್ರೆಝಿಲ್ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ. ರಶ್ಯದಲ್ಲಿ ಈ ವರ್ಷ ನಡೆದ ವಿಶ್ವಕಪ್ ವೇಳೆ ಥಿಯಾಗೊ ಸಿಲ್ವಾ, ಮಿರಾಂಡ ಹಾಗೂ ಮಾರ್ಸೆಲೊ ನಾಯಕನ ಕರ್ತವ್ಯವನ್ನು ಹಂಚಿಕೊಂಡಿದ್ದರು. ‘‘ನಾಯಕನಾಗಿ ನೇಮಕಗೊಂಡಿರುವುದು ಮಹಾ ಗೌರವ. ನನ್ನ ಕರ್ತವ್ಯವನ್ನು ನಿಭಾಯಿಸಲು ಹಾಗೂ ತಂಡದ ಗೆಲುವಿಗೆ ಸರ್ವ ಪ್ರಯತ್ನ ನಡೆಸುವೆ’’ ಎಂದು ನೇಮರ್ ಪ್ರತಿಕ್ರಿಯೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News