ಐಎಸ್ಎಫ್: ಸಾಮಾಜಿಕ ಸೇವಾ ವಿಭಾಗ ತರಬೇತಿ ಕಾರ್ಯಾಗಾರ

Update: 2018-09-09 05:09 GMT

ದಮ್ಮಾಮ್, ಸೆ. 9: ಸಾಮಾಜಿಕ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಅನಿವಾಸಿ ಭಾರತೀಯ ಸಂಘಟನೆ ಇಂಡಿಯನ್ ಸೋಷಿಯಲ್ ಫೊರಮ್ (ಐಎಸ್ಎಫ್) ವತಿಯಿಂದ ವಾರ್ಷಿಕ ಸಾಮಾಜಿಕ ಸೇವಾ ವಿಭಾಗ ತರಬೇತಿ ಕಾರ್ಯಾಗಾರ ರೋಸ್‌ ರೆಸ್ಟೋರೆಂಟ್ ಸಭಾಂಗಣದಲ್ಲಿ ನಡೆಯಿತು.

ಸಭಾ ಕಾರ್ಯಕ್ರಮವನ್ನು ಇಂಡಿಯನ್ ಸೋಷಿಯಲ್ ಫೊರಮ್ ಇದರ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಸಲಾಹುದ್ದೀನ್ ನೆರೆದ ಶಿಬಿರಾರ್ಥಿಗಳನ್ನು ಮತ್ತು ಗಣ್ಯಅತಿಥಿಗಳನ್ನು ಸ್ವಾಗತಿಸುವುದರ ಮೂಲಕ ಉದ್ಘಾಟಿಸಿದರು.

ಐಎಸ್ಎಫ್ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಫೈರೋಝ್  ಸಂಘಟನೆಯ ಕುರಿತು ಅತಿಥಿಗಳಿಗೆ ಕಿರು ಪರಿಚಯ ನೀಡಿ ನಂತರ ಶಿಬಿರಾರ್ಥಿಗಳಿಗೆ ಸಾಮಾಜಿಕ ಸೇವಾ ವಿಭಾಗದ ಕಾರ್ಯವಿಧಾನದ ಬಗ್ಗೆ ತರಬೇತಿ ನೀಡಿದರು. ಸಾಮಾಜಿಕ ಸೇವಾ ವಿಭಾಗದ ಕಾರ್ಯಗಳ ವರದಿಯನ್ನು ಐಎಸ್ಎಫ್ ರಾಜ್ಯ ಸಮಿತಿ ಸದಸ್ಯರಾದ ಆರಿಫ್ ಜೋಕಟ್ಟೆ ಮಂಡಿಸಿದರು. ತರಬೇತಿಯ ನಂತರ ನಡೆದ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ‌ ಅಲ್ಲಿ ಸೇರಿದ್ದ ಕಾರ್ಯಕರ್ತರ ಮತ್ತು ಅತಿಥಿಗಳ ಪ್ರಶ್ನೆಗಳಿಗೆ ಸಾಮಾಜಿಕ ಸೇವಾ ವಿಭಾಗದ ಮುಖ್ಯಸ್ಥ  ನೌಶಾದ್ ಕಾಟಿಪಳ್ಳ ಉತ್ತರಿಸಿದರು.

ಮರುಳುಗಾಡಿನಲ್ಲಿ ದುಡಿಮೆಯ ನಂತರದ ತಮ್ಮ ಸಮಯವನ್ನು ಸಾಮಾಜಿಕ ಸೇವೆಗೆ ಮುಡಿಪಾಗಿಟ್ಟ ಐಎಸ್ಎಫ್  ಸಾಮಾಜಿಕ ಸೇವಾ ವಿಭಾಗದಲ್ಲಿ ಅತ್ಯುನ್ನತ  ಸೇವೆಯೊಂದಿಗೆ ಗುರುತಿಸಿಕೊಂಡ ಇಬ್ರಾಹಿಂ ಅಬ್ದುಲ್ ಖಾದರ್ ಖೊಬಾರ್, ರಫೀಕ್ ಬುಡೋಳಿ  ಅಲ್ ಹಸ್ಸಾ,  ಹಸನ್ ಕಿನ್ನಿಗೊಳಿ ಜುಬೈಲ್ ಅವರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಅತಿಥಿಗಳಾಗಿ ಇಂಡಿಯಾ ಫ್ರೆಟರ್ನಿಟಿ ಫೋರಂ ಇದರ ಜಿಲ್ಲಾ ಕಾರ್ಯದರ್ಶಿ ಸಾಜಿದ್ ವಳವೂರ್,  ರಾಯಚೂರು ಟ್ರಸ್ಟ್'ನ ತಜಮುಲ್ ಹುಸೈನ್, ಮಂಗಳೂರು ಅಸೋಸಿಯೇಷನ್ ಸೌದಿ ಅರೇಬಿಯಾ (MASA)ದ ನವಿನ್ ಭಂಡಾರಿ, ಮಹಮ್ಮದ್ ನೌಮಾನ್,  ಸೈಯದ್ ಅಮೀನ್ ಮೈಸೂರು ಸಯ್ಯದ್ ಅಮೀರ್,  ಸಫೀರುಲ್ ಹಕ್ ತಮೀಮಿ, ಡಾಕ್ಟರ್ ಅಭಿಜಿತ್ (ರಾವ್ಡ ಹಾಸ್ಪಿಟಲ್), ಅನ್ವರ್ ಸದಾತ್ ಮಂಗಳೂರು, ಇಬ್ರಾಹಿಂ ಅಲ್ ವಸತ್ ಮಂಗಳೂರು, ಸುಹೈಲ್ ಮೈಸೂರು, ಇಫ್ತಿಕಾರ್ ಬೆಂಗಳೂರು, ಮಹಮ್ಮದ್ ಅಶ್ರಪ್ ಹೆಲ್ಪಿ, ಅತೀಕ್ ಮೈಸೂರು, ಹಮೀದ್ ಹುಸೇನ್, ಸೈಯದ್ ಸೈಪುಲ್ಲಾ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಆರಿಫ್ ಜೋಕಟ್ಟೆ ನಿರೂಪಿಸಿ ಇಂಡಿಯನ್ ಸೊಷಿಯಲ್ ಫೋರಂ ರಾಜ್ಯಾಧ್ಯಕ್ಷ ಷರೀಫ್ ಜೋಕಟ್ಟೆ ಯವರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News