ಐಶ್ವರ್ಯಾಗೆ ಗುಲಾಬ್ ಜಾಮೂನ್

Update: 2018-09-09 11:00 GMT

ಐಶ್ವರ್ಯಾ ರೈ ಬಚ್ಚನ್ ಹಾಗೂ ಸಂಜಯ್ ಲೀಲಾ ಬನ್ಸಾಲಿ, ಪ್ರಾಜೆಕ್ಟ್‌ಗಾಗಿ ಜೊತೆಯಾದಾಗಲೆಲ್ಲಾ, ಅವರು ಬೆಳ್ಳಿತೆರೆಯಲ್ಲಿ ಸಂಚಲನವನ್ನೇ ಸೃಷ್ಟಿಸಿಬಿಡುತ್ತಾರೆ. ‘ಹಮ್ ದಿಲ್ ದೆ ಚುಕೆ ಸನಮ್’, ‘ದೇವದಾಸ್’ ಹಾಗೂ ‘ಗುಝಾರಿಶ್’ನಂತಹ ಚಿತ್ರಗಳು ಅದಕ್ಕೆ ನಿದರ್ಶನಗಳಾಗಿವೆ. ಬನ್ಸಾಲಿಯವರ ಮುಂದಿನ ಚಿತ್ರದಲ್ಲಿ ಐಶ್ವರ್ಯಾ ರೈ ನಟಿಸಲಿದ್ದಾರೆಂಬ ವದಂತಿಗಳು ಬಹಳ ಸಮಯದಿಂದಲೂ ಕೇಳಿಬರುತ್ತಿದ್ದವು. ಆದರೆ ಇದೀಗ ಕೇಳಿ ಬರುತ್ತಿರುವ ತಾಜಾ ಸುದ್ದಿಯೊಂದರ ಪ್ರಕಾರ ಐಶ್ವರ್ಯಾ ಅವರು ಬನ್ಸಾಲಿ ನಿರ್ದೇಶನದ ಚಿತ್ರದ ಬದಲು, ಅನುರಾಗ್ ಕಶ್ಯಪ್ ಅವರ ‘ಗುಲಾಬ್ ಜಾಮೂನ್’ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರಂತೆ.

ಬನ್ಸಾಲಿ ಚಿತ್ರದ ಬದಲಿಗೆ ‘ಗುಲಾಬ್ ಜಾಮೂನ್’ನಲ್ಲಿ ನಟಿಸುವುದಕ್ಕೆ ಐಶ್ವರ್ಯಾ ರೈ ಆದ್ಯತೆ ನೀಡಿರುವುದಕ್ಕೆ ಸೂಕ್ತ ಕಾರಣವೂ ಇದೆ. ಯಾಕೆಂದರೆ ಗುಲಾಬ್ ಜಾಮೂನ್‌ನಲ್ಲಿ ಪತಿ ಅಭಿಷೇಕ್ ಬಚ್ಚನ್ ನಾಯಕನಾಗಿ ನಟಿಸಲಿದ್ದಾರೆ. ಆದರೆ ಎರಡೂ ಚಿತ್ರಗಳ ಚಿತ್ರೀಕರಣದ ಡೇಟ್ಸ್ ಪರಸ್ಪರ ಕ್ಲಾಶ್ ಆಗುವುದರಿಂದ, ಬನ್ಸಾಲಿ ಚಿತ್ರವನ್ನು ನಿರಾಕರಿಸಲು ಐಶ್ವರ್ಯಾ ನಿರ್ಧರಿಸಿದ್ದರೆಂದು ಆಂಗ್ಲ ದಿನಪತ್ರಿಕೆಯೊಂದು ವರದಿ ಮಾಡಿದೆ. ಇದಕ್ಕಿಂತಲೂ ಹೆಚ್ಚಾಗಿ ಗುಲಾಬ್ ಜಾಮೂನ್‌ನಲ್ಲಿ ಇವರಿಬ್ಬರದೂ ಅತ್ಯಂತ ಅದ್ಭುತವಾದ ಪಾತ್ರಗಳಂತೆ. ತಾವು ಹಿಂದೆಂದೂ ನಟಿಸಿರದಂತಹ ಪಾತ್ರಗಳಲ್ಲಿ ನಟಿಸುವ ಅವಕಾಶವು ಈ ಚಿತ್ರದಲ್ಲಿ ದೊರೆತಿರುವುದರಿಂದ ಆ್ಯಶ್-ಅಭಿ ಇಬ್ಬರೂ ಗುಲಾಬ್ ಜಾಮೂನ್ ಸವಿಯಲು ಸಿದ್ಧರಾಗಿದ್ದಾರಂತೆ.ಈ ಹಿಂದೆ ಐಶ್ವರ್ಯಾ ಹಾಗೂ ಅಭಿಷೇಕ್, ಮಣಿರತ್ನಂ ನಿರ್ದೇಶನದ ರಾವಣ್‌ನಲ್ಲಿ ಜೊತೆಯಾಗಿ ಅಭಿನಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News