ವೆನೆಝುವೆಲದಲ್ಲಿ ಕ್ಷಿಪ್ರಕ್ರಾಂತಿ ಯೋಜಿಸಿದ್ದ ಅಮೆರಿಕ: ‘ನ್ಯೂಯಾರ್ಕ್ ಟೈಮ್ಸ್’ ವರದಿ

Update: 2018-09-09 17:34 GMT

ವಾಶಿಂಗ್ಟನ್, ಸೆ. 9: ವೆನೆಝುವೆಲದ ಅಧ್ಯಕ್ಷ ನಿಕೊಲಸ್ ಮಡುರೊರನ್ನು ಅಧಿಕಾರದಿಂದ ಕೆಳಗಿಳಿಸುವ ಯೋಜನೆ ಬಗ್ಗೆ ಚರ್ಚಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ಅಧಿಕಾರಿಗಳು ವೆನೆಝುವೆಲ ಸೇನೆಯ ಅಧಿಕಾರಿಗಳನ್ನು ರಹಸ್ಯವಾಗಿ ಭೇಟಿಯಾಗಿದ್ದರು ಎಂದು ‘ನ್ಯೂಯಾರ್ಕ್ ಟೈಮ್ಸ್’ ಶನಿವಾರ ವರದಿ ಮಾಡಿದೆ.

ಆದರೆ, ಬಳಿಕ ಈ ವಿಷಯದಲ್ಲಿ ಸಹಾಯ ಮಾಡದಿರಲು ಅಮೆರಿಕದ ಅಧಿಕಾರಿಗಳು ನಿರ್ಧರಿಸಿದರು ಎಂದು ಪತ್ರಿಕೆ ಹೇಳಿದೆ.

ಟ್ರಂಪ್ ವೆನೆಝುವೆಲದ ಎಡಪಂಥೀಯ ಆಡಳಿತದ ತೀವ್ರ ಟೀಕಾಕಾರರಾಗಿದ್ದಾರೆ.

ವೆನೆಝುವೆಲ ತೀವ್ರ ಆರ್ಥಿಕ ಮತ್ತು ಮಾನವೀಯ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಹಿಂಸಾತ್ಮಕ ಪ್ರತಿಭಟನೆಗಳು ನಡೆಯುತ್ತಿವೆ. ಅಲ್ಲಿನ ಜನರು ನೆರೆಯ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಕ್ಷಿಪ್ರಕ್ರಾಂತಿಯ ಯೋಜನೆಯನ್ನು ನಿಲ್ಲಿಸಲಾಗಿದೆ ಎಂದು ರಹಸ್ಯ ಸಭೆಯಲ್ಲಿ ಭಾಗವಹಿಸಿದ ಅಮೆರಿಕದ ಅಧಿಕಾರಿಗಳು ಮತ್ತು ವೆನೆಝುವೆಲದ ಮಾಜಿ ಸೇನಾ ಕಮಾಂಡರ್ ಒಬ್ಬರನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News