ಜೇಮ್ಸ್ ಆ್ಯಂಡರ್ಸನ್‌ಗೆ ದಂಡ

Update: 2018-09-09 18:59 GMT

ಲಂಡನ್, ಸೆ.9: ಭಾರತ ವಿರುದ್ಧ ನಡೆಯುತ್ತಿರುವ ಐದನೇ ಟೆಸ್ಟ್ ಪಂದ್ಯದ ಎರಡನೇ ದಿನವಾದ ಶನಿವಾರ ಅಂಪೈರ್ ತೀರ್ಪಿನ ಬಗ್ಗೆ ಅಗೌರವ ತೋರಿದ ಇಂಗ್ಲೆಂಡ್ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್‌ಗೆ ಪಂದ್ಯಶುಲ್ಕದಲ್ಲಿ 15 ಶೇ. ದಂಡ ವಿಧಿಸಲಾಗಿದೆ. ದಂಡವಲ್ಲದೆ ವೇಗದ ಬೌಲರ್ ಶಿಸ್ತಿನ ದಾಖಲೆಪುಸ್ತಕದಲ್ಲಿ ಒಂದು ಡಿಮೆರಿಟ್ ಅಂಕವನ್ನು ಸೇರಿಸಲಾಗಿದೆ. ಸೆ.2016ರಲ್ಲಿ ಪರಿಷ್ಕೃತ ನೀತಿ ಸಂಹಿತೆ ಜಾರಿಯಾದ ಬಳಿಕ ಆ್ಯಂಡರ್ಸನ್ ಮಾಡಿರುವ ಮೊದಲ ತಪ್ಪು ಇದಾಗಿದೆ ಎಂದು ಐಸಿಸಿ ತಿಳಿಸಿದೆ.

  ಭಾರತದ ಇನಿಂಗ್ಸ್‌ನ 29ನೇ ಓವರ್‌ನಲ್ಲಿ ಆ್ಯಂಡರ್ಸನ್ ಅವರು ಅಂಪೈರ್‌ರೊಂದಿಗೆ ಅನುಚಿತವಾಗಿ ವರ್ತಿಸಿದ ಘಟನೆ ನಡೆದಿತ್ತು. ವಿರಾಟ್ ಕೊಹ್ಲಿ ವಿರುದ್ಧ ಆ್ಯಂಡರ್ಸನ್ ಸಲ್ಲಿಸಿದ ಎಲ್ಬಿಡಬ್ಲು ಮನವಿಯನ್ನು ಅಂಪೈರ್ ಕುಮಾರ ಧರ್ಮಸೇನ ತಳ್ಳಿಹಾಕಿದರು. ಇದರಿಂದ ಕೆರಳಿದ ಆ್ಯಂಡರ್ಸನ್ ಅವರು ಅಂಪೈರ್ ಧರ್ಮಸೇನ ಅವರತ್ತ ಧಾವಿಸಿ ಅವರ ಕೈಯ್ಯಲ್ಲಿದ್ದ ತನ್ನ ಕ್ಯಾಪ್ ಹಾಗೂ ಅಂಗಿಯನ್ನು ಕಸಿದುಕೊಂಡರಲ್ಲದೆ ಅವರೊಂದಿಗೆ ಮಾತಿನ ಚಕಮಕಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News