ವಿದಾಯದ ಟೆಸ್ಟ್‌ನಲ್ಲಿ ಕುಕ್ ಶತಕ

Update: 2018-09-10 12:06 GMT

ಲಂಡನ್, ಸೆ.10: ಓವಲ್ ಮೈದಾನದಲ್ಲಿ ನಡೆಯುತ್ತಿರುವ ಪ್ರವಾಸಿ ಭಾರತದ ವಿರುದ್ಧದ ಐದನೇ ಹಾಗೂ ಅಂತಿಮ ಟೆಸ್ಟ್‌ನ ಎರಡನೇ ಇನಿಂಗ್ಸ್ ನಲ್ಲಿ ಇಂಗ್ಲೆಂಡ್‌ನ ಆರಂಭಿಕ ದಾಂಡಿಗ ಅಲಿಸ್ಟೈರ್ ಕುಕ್ ಶತಕ ದಾಖಲಿಸಿದರು.

ವಿದಾಯದ ಟೆಸ್ಟ್ ಆಡುತ್ತಿರುವ 33ರ ಹರೆಯದ ಕುಕ್ 210 ಎಸೆತಗಳಲ್ಲಿ 8 ಬೌಂಡರಿಗಳ ಸಹಾಯದಿಂದ 33ನೇ ಶತಕ ದಾಖಲಿಸಿದರು.

ಕುಕ್ ಮೂರನೇ ದಿನದಾಟದಂತ್ಯಕ್ಕೆ 46 ರನ್ ಗಳಿಸಿ ಔಟಾಗದೆ ಕ್ರೀಸ್‌ನಲ್ಲಿದ್ದರು. 161ನೇ ಟೆಸ್ಟ್ ಆಡುತ್ತಿರುವ ಕುಕ್ ಮೊದಲ ಇನಿಂಗ್ಸ್ ನಲ್ಲಿ 71 ರನ್ ಗಳಿಸಿ ಔಟಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News