ಅಜ್ಮಾನ್ : ನೂತನ 'ತುಂಬೆ ಆಸ್ಪತ್ರೆ'ಯಿಂದ ಅಂತಾರಾಷ್ಟ್ರೀಯ ಸಮ್ಮೇಳನ, ತಜ್ಞರಿಗೆ ಸನ್ಮಾನ

Update: 2018-09-10 15:36 GMT

ಅಜ್ಮನ್, ಸೆ. 10: ನೂತನ ತುಂಬೆ ಫಿಸಿಕಲ್ ತೆರಪಿ ಆ್ಯಂಡ್ ರಿಹ್ಯಾಬಿಲಿಟೇಷನ್ ಆಸ್ಪತ್ರೆ (ದೈಹಿಕ ಚಿಕಿತ್ಸೆ ಮತ್ತು ಪನರ್ವಸತಿ ಆಸ್ಪತ್ರೆ)ಯು ಸೋಮವಾರ ವಿಶ್ವ ಫಿಸಿಯೊಥೆರಪಿ ದಿನದ ಅಂಗವಾಗಿ ಅಜ್ಮಾನ್‌ನ ತುಂಬೆ ಮೆಡಿಸಿಟಿಯಲ್ಲಿ ಪುನರ್ವಸತಿ ವಿಧಾನದಲ್ಲಿ ನೂತನ ಅನ್ವೇಷಣೆಯ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನ (ಕಾನ್ಫರೆನ್ಸ್ ಆನ್ ಇನೊವೇಶನ್ಸ್ ಇನ್ ರಿಹ್ಯಾಬಿಲಿಟೇಶನ್ ಪ್ರಾಕ್ಟಿಸ್) ವನ್ನು ಯಶಸ್ವಿಯಾಗಿ ಆಯೋಜಿಸಿತು.

ಈ ಸಮ್ಮೇಳನದಲ್ಲಿ ಪ್ರಸಿದ್ಧ ಅಂತಾರಾಷ್ಟ್ರೀಯ ವಾಗ್ಮಿಗಳು ಮತ್ತು ತಜ್ಞರು ಭಾಗವಹಿಸಿ, ದೈಹಿಕ ಚಿಕಿತ್ಸೆ ಮತ್ತು ಪುನರ್ವಸತಿ ಕ್ಷೇತ್ರದಲ್ಲಿ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ತಮ್ಮ ಅನುಭವ ಮತ್ತು ಅಭಿಪ್ರಾಯವನ್ನು ಹಂಚಿಕೊಂಡರು.

ದುಬೈ ಆರೋಗ್ಯ ಪ್ರಾಧಿಕಾರದ ಮಹಾ ನಿರ್ದೇಶಕ ಮತ್ತು ಮಂಡಳಿಯ ಅಧ್ಯಕ್ಷ  ಹುಮೈದ್ ಅಲ್ ಕುತಮಿ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.  ತುಂಬೆ ಸಮೂಹದ ಸ್ಥಾಪಕಾಧ್ಯಕ್ಷರಾದ ಡಾ.ತುಂಬೆ ಮೊಯ್ದಿನ್ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ನೂತನ ಆಸ್ಪತ್ರೆಯನ್ನು ಇದೇ ಸಂದರ್ಭದಲ್ಲಿ ಹುಮೈದ್ ಅಲ್ ಕುತಮಿ ಉದ್ಘಾಟಿಸಿ ವಿವಿಧ ವಿಭಾಗಗಳಿಗೆ ಭೇಟಿ ನೀಡಿದರು.

ಯುಎಇಗೆ ಭಾರತದ ರಾಯಭಾರಿ ನವದೀಪ್ ಸಿಂಗ್ ಸೂರಿ, ಯುಎಇಗೆ ಇಟಲಿ ರಾಯಭಾರಿ ಲಿಬೊರಿಯೊ ಸ್ಟೆಲಿನೊ, ಯುಎಇಯಲ್ಲಿರುವ ಇಟಲಿಯ ಕಾನ್ಸುಲ್ ಜನರಲ್ ವ್ಯಾಲೆಂಟಿನ ಸೆಟ್ಟ ,ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಮುಖ್ಯಕಾರ್ಯಕಾರಿ ಅಧಿಕಾರಿ ಡೇವ್ ರಿಚರ್ಡ್ಸನ್ ,  ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಸೀಮ್ ಅಕ್ರಂ ಮತ್ತಿತರ ಗಣ್ಯರು ಈ ವೇಳೆ ಉಪಸ್ಥಿತರಿದ್ದರು.

ಎಮಿರೇಟ್‌ನ ಫಿಸಿಯೊಥೆರಪಿ ಸೊಸೈಟಿಯ ಅಧ್ಯಕ್ಷೆ, ಯುಎಇಯ ಮೊದಲ ರಾಷ್ಟ್ರೀಯ ಥೆರಪಿಸ್ಟ್ ಅಮಲ್ ಅಲ್ ಶಮ್ಲನ್, ದುಬೈ ಸಾರ್ವಜನಿಕ ಆರೋಗ್ಯ ಕೇಂದ್ರದ ಫಿಸಿಯೊಥೆರಪಿ ವಿಭಾಗದ ಮುಖ್ಯಸ್ಥ ಡಾ. ಅಬ್ದುಲ್ ಅದೀಮ್ ಕಮ್ಕರ್, ಇಟಲಿಯ ವಾಲ್ಡುಸ್ ವಿಲ್ಲ ಬೆರೆಟ್ಟ ಪುನರ್ವಸತಿ ಕೇಂದ್ರ ಆಸ್ಪತ್ರೆಯ ನಿರ್ದೇಶಕ ಡಾ. ಫ್ರಾಂಕೊ ಮೊಲ್ಟೆನಿ, ಝಯೆದ್ ಹೈಯರ್ ಆರ್ಗನೈಸೇಶನ್ ನ  ಪುನರ್ವಸತಿ ಕೇಂದ್ರದ ಮುಖ್ಯಸ್ಥ ಅಮಿನ ಅಲ್ ಸಾದಿ,  ಟ್ರಾನ್ಸ್‌ಫಾರ್ಮ್ ಫಿಟ್ನೆಸ್ ಇದರ ಡಾ. ಜಾರ್ಜ್ ಜಾನ್, ದುಬೈ ಶಿಕ್ಷಣ ಸಚಿವಾಲಯದ ಆರೋಗ್ಯ ಮತ್ತು ದೈಹಿಕ ಚಟುವಟಿಕೆಗಳ ವಿಶೇಷಜ್ಞ ಡಾ. ಒಸಮಾ ಕಮೆಲಿ ಅಲಿ ಅಲಲ್ಲ, ಯು.ಟಿ. ಇಫ್ತಿಕಾರ್ ಅಲಿ, ಯುಎಇ ಫುಟ್ಬಾಲ್ ಅಸೋಸಿಯೇಶನ್ ಮುಖ್ಯಸ್ಥ ಮರ್ವನ್ ಬಿನ್ ಗಲೈತ, ಯುಎಇ ಅಥ್ಲೆಟಿಕ್ಸ್ ಫೆಡರೇಶನ್ ಅಧ್ಯಕ್ಷ ಅಹ್ಮದ್ ಅಲ್ ಕಮಲಿ, ದುಬೈ ಕ್ರೀಡಾ ಮಂಡಳಿ ಪ್ರಧಾನ ಕಾರ್ಯದರ್ಶಿ ಸೈಯದ್ ಮುಹಮ್ಮದ್ ಹರೆಬ್, ಯುಎಇ ಉನ್ನತ ಶಿಕ್ಷಣ ಕ್ರೀಡಾ ಪ್ರಾಧಿಕಾರದ ಪ್ರಧಾನ ಕಾರ್ಯದರ್ಶಿ, ಡಾ. ಉಮರ್ ಅಬ್ದುಲ್ ಅಝೀಝ್ ಅಲ್ ಹಾಯಿ, ಯುಎಇ ಅಂತರ್‌ ಶಾಲಾ ಕ್ರೀಡಾ ಮಂಡಳಿ ಅಧ್ಯಕ್ಷ ಮರ್ವನ್ ಅಹ್ಮದ್ ಅಲ್ಸವಲೆಹ್, ಎಮಿರೇಟ್ಸ್ ಕ್ರಿಕೆಟ್ ಮಂಡಳಿ ಉಪಾಧ್ಯಕ್ಷ ಖಾಲಿದ್ ಅಲ್ ಝರೌನಿ, ಅಜ್ಮನ್ ಕ್ರಿಕೆಟ್ ಕೌನ್ಸಿಲ್ ಹಾಗೂ ದುಬೈ ಟೆನಿಸ್ ಅಕಾಡೆಮಿ ಸ್ಟ್ರಾತ್ ಶೆರಿ ಸಿಇಒ ಶಹಝಾದ್ ಅಲ್ತಾಫ್ ಅವರನ್ನು ಈ ಸಂದರ್ಭದಲ್ಲಿ ಹುಮೈದ್ ಅಲ್ ಕುತಮಿ ವಿಶೇಷ ಗೌರವ ಪ್ರಶಸ್ತಿ  ನೀಡಿ ಸನ್ಮಾನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News